ಮಂಗಳೂರು: ವೆನ್ಲಾಕ್ ಕೋವಿಡ್ ಜಿಲ್ಲಾಸ್ಪತ್ರೆಯ ವೈರಾಲಜಿ ಲ್ಯಾಬ್ ಗೆ ಸರಬರಾಜಾದ ಪರೀಕ್ಷಾ ಕಿಟ್ ಗಳು ಸಮರ್ಪಕವಾಗಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ನಮ್ಮಲ್ಲಿನ ಎಲ್ಲಾಕಿಟ್ ಗಳು ಸಮರ್ಪಕವಾಗಿದ್ದು, ವರದಿಗಳು ಸಮರ್ಪಕವಾಗಿ ಬರುತ್ತಿವೆ ಎಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಡಿಎಂಒ ಡಾ.ಸದಾಶಿವ ಹೇಳಿದರು.
ವೆನ್ಲಾಕ್ ಕೋವಿಡ್ ಜಿಲ್ಲಾಸ್ಪತ್ರೆಯ ವೈರಾಲಜಿ ಲ್ಯಾಬ್ ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವೈರಾಲಜಿ ಲ್ಯಾಬ್ ಪರೀಕ್ಷೆಗಳು ಐಸಿಎಂಆರ್ ಹಾಗೂ ರಾಜ್ಯ ಸರಕಾರದಿಂದ ಅನುಮೋದನೆ ಗೊಂಡಿದೆ. ಎಲ್ಲಾ ಪಾಸಿಟಿವ್ ಪ್ರಕರಣಗಳ ಪರೀಕ್ಷಾ ವರದಿಗಳು ಐಸಿಎಂಆರ್ ನಿಂದ ದೃಢೀಕರಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಇಲ್ಲಿಗೆ ಗಂಟಲು ದ್ರವ ಮಾದರಿಗಳು ಪರೀಕ್ಷೆಗೆ ಇಲ್ಲಿಗೆ ಬರುತ್ತಿರುತ್ತಿವೆ. ಆದರೆ ಕಳೆದ ಮೂರು ದಿನಗಳಿಂದ ಗಂಟಲು ದ್ರವ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವದರಿಂದ ವರದಿಗಳು ತಡ ಆಗಿವೆ. ಆದರೆ ಪರೀಕ್ಷಾ ಕಿಟ್ ಗಳ ದೋಷದಿಂದ ಯಾವುದೇ ಪ್ರಕರಣಗಳು ನಡೆದಿಲ್ಲ ಎಂಬುದು ಸುಳ್ಳು ಸುದ್ದಿ ಎಂದು ಡಿಎಂಒ ಡಾ.ಸದಾಶಿವ ಸ್ಪಷ್ಟನೆ ನೀಡಿದರು.