ETV Bharat / state

ಸುರತ್ಕಲ್ ಹತ್ಯೆ ಪ್ರಕರಣ: ನಿಷೇದಾಜ್ಞೆ ಡಿ 29ರವರೆಗೆ ವಿಸ್ತರಣೆ

ಸುರತ್ಕಲ್​ ಹತ್ಯೆ ಹಿನ್ನೆಲೆ ಜಾರಿಯಾಗಿದ್ದ ನಿಷೇಧಾಜ್ಞೆ - ಇಂದು ಬೆಳಗ್ಗೆ 6 ಗಂಟೆವರೆಗೆ ಇದ್ದ ನಿಷೇಧಾಜ್ಞೆ 29 ವರೆಗೆ ವಿಸ್ತರಣೆ - ನಾಲ್ಕು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

extension of prohibition till 29th
ನಿಷೇದಾಜ್ಞೆ ಡಿ 29 ವರೆಗೆ ವಿಸ್ತರಣೆ
author img

By

Published : Dec 27, 2022, 1:15 PM IST

Updated : Dec 27, 2022, 1:43 PM IST

ಮಂಗಳೂರು (ದಕ್ಷಿಣ ಕನ್ನಡ): ಸುರತ್ಕಲ್​ನಲ್ಲಿ ದುಷ್ಕರ್ಮಿಗಳಿಬ್ಬರು ಶನಿವಾರ ರಾತ್ರಿ ಕೃಷ್ಣಾಪುರ ನಿವಾಸಿ ಜಲೀಲ್ ಎಂಬವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಈ ಪ್ರಕರಣ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಭಾನುವಾರ ಬೆಳಗ್ಗಿನಿಂದಲೇ ಸುರತ್ಕಲ್ ಸುತ್ತಮುತ್ತಲಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಕಿ ಮಂಗಳೂರು ನಗರ ಪೊಲೀಸ್​ ಕಮಿಷನರ್​ ಆದೇಶಿಸಿದ್ದರು. ಪರಿಸ್ಥಿತಿ ಇನ್ನೂ ತಿಳಿಯಾಗದೇ ಹಿನ್ನೆಲೆ ಈ ನಿಷೇಧಾಜ್ಞೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಯಿಂದ ಡಿ. 29ರ ಬೆಳಗ್ಗೆ 6 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮಂಗಳೂರು ನಗರ ಪೊಲೀಸ್ ‌ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಮಂಗಳೂರು ‌ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದರು. ಈ ಆದೇಶ ಇಂದು ಮುಂಜಾನೆಗೆ ಮುಕ್ತಾಯಗೊಂಡಿದ್ದು, ನಿಷೇದಾಜ್ಞೆಯನ್ನು ಡಿ. 29 ವರೆಗೆ ಮತ್ತೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಜಲೀಲ್ ಎಂಬುವರು ತಾವು ನಡೆಸುತ್ತಿದ್ದ ಅಂಗಡಿಯಲ್ಲಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿದ್ದರು. ಆರೋಪಿಗಳ ಪತ್ತೆಗೆ 8 ಪೊಲೀಸರ ತಂಡವನ್ನು ರಚಿಸಲಾಗಿತ್ತು. ಕೊಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್​ ಕಮಿಷನರ್​ ಶಶಿಕುಮಾರ್​ ಹೇಳಿದ್ದರು. ಅದರಂತೆಯೇ ಜಲೀಲ್​ ಹತ್ಯೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಲೀಲ್​ ಅವರ ಅಂತ್ಯಕ್ರಿಯೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂವರು ಆರೋಪಿಗಳಲ್ಲಿ ಇಬ್ಬರು ಜಲೀಲ್​ ಅವರಿಗೆ ಚುಚ್ಚಿ ಕೊಲೆ ಮಾಡಿದ್ದರೆ, ಇನ್ನೊಬ್ಬ ಅವರು ಬೈಕ್​ನಲ್ಲಿ ಪರಾರಿಯಾಗಲು ಸಹಕರಿಸಿದ್ದನು. ಬಂಧಿತರನ್ನು ಶೈಲೇಶ್​ ಅಲಿಯಾಸ್​ ಶೈಲೇಶ್​ ಪೂಜಾರಿ, ಉಡುಪಿಯ ಹೆಜಮಾಡಿ ನಿವಾಸಿ ಎಚ್​​ ಸವಿನ್​ ಕಾಂಚಾನ್​ ಅಲಿಯಾಸ ಮುನ್ನ ಹಾಗೂ ಕೃಷ್ಣಾಪೂರ ಮೂರನೇ ಬ್ಲಾಕ್​ ನಿವಾಸಿ ಪವನ್​ ಅಲಿಯಾಸ್ ಪಚ್ಚು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸುರತ್ಕಲ್‌ ಜಲೀಲ್​ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

Last Updated : Dec 27, 2022, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.