ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮವನ್ನು ನೆರವೇರಿಸಲಾಯಿತು.
ಋಷಿಗಳು ಹಿಂದೆ ಕ್ರಿಮಿ ರೂಪದ ಮಹಾಮಾರಿಯನ್ನು ತಮ್ಮ ತಪೋ ಮಹಿಮೆಯಿಂದ ದೂರಮಾಡಿ ನಾಶ ಮಾಡಿರುವಂತದ್ದು, ಜೀವ ರಾಶಿಯನ್ನು ರಕ್ಷಿಸಿರುವುದು, ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಈಗ ಮನುಕುಲಕ್ಕೆ ಆತಂಕ ಉಂಟು ಮಾಡಿರುವ ಕೊರೊನಾ ವೈರಸ್ ಅನ್ನು ದೂರ ಮಾಡುವಂತೆ ಕೋರಿ ಹೋಮ ಹವನ ಹಮ್ಮಿಕೊಳ್ಳಲಾಯಿತು.
ಈ ಹೋಮವನ್ನು ಶ್ರೀ ವೆಂಕಟ್ರಮಣ ಅಡಿಗ, ಇವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಅವರು ಭಾಗವಹಿಸಿದ್ದರು.