ಮಂಗಳೂರು : ಮೋಟಾರು ಕಾಯ್ದೆ ನಿಯಮದ ಪ್ರಕಾರ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪೆಟ್ಟಿಗೆ ಇರಿಸಬೇಕಾಗಿರುವುಜು ಕಡ್ಡಾಯ. ಆದರೆ, ನಗರದ ಕೆಲ ಖಾಸಗಿ ಬಸ್ಗಳಲ್ಲಿ ಈ ನಿಯಮ ಕಡತಕ್ಕೆ ಮಾತ್ರ ಸೀಮಿತವಾಗಿದೆ.
ಸಾರ್ವಜನಿಕ ಸಾರಿಗೆಗಳಲ್ಲಿ ದಿನಂಪ್ರತಿ ನೂರಾರು ಜನ ಓಡಾಡುತ್ತಿರುತ್ತಾರೆ. ವಾಹನಗಳ ಅಪಘಾತ ಯಾವ ಸಂದರ್ಭದಲ್ಲಿಯಾದ್ರೂ ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸಲು ಫರ್ಸ್ಟ್ ಏಡ್ ಕಿಟ್ ಅಗತ್ಯ. ಆದರೆ, ಸಾರ್ವಜನಿಕ ಸಾರಿಗೆಗಳಲ್ಲಿ ಫರ್ಸ್ಟ್ ಏಡ್ ಕಿಟ್‌ನ ಮುತುವರ್ಜಿಯಿಂದ ಇರಿಸುವ ಬಗ್ಗೆ ನಿರ್ಲಕ್ಷ್ಯ ಕಾಣುತ್ತಿದೆ.
ಓದಿ: ಕೌಟುಂಬಿಕ ಕಲಹ: ತಾಯಿ - ಸಹೋದರಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ!
ನಗರದಲ್ಲಿ ಖಾಸಗಿ ಬಸ್ಗಳ ಪ್ರಾಬಲ್ಯ ಹೆಚ್ಚಿದೆ. ಇದರಲ್ಲಿ ಕೆಲ ಬಸ್ಗಳಲ್ಲಿ ಮಾತ್ರ ಈ ನಿಯಮ ಪಾಲನೆಯಾಗುತ್ತಿದೆ. ಇನ್ನು, ಕೆಲವು ಬಸ್ಗಳಲ್ಲಿ ಅದು ಬಾಕ್ಸ್ಗೆ ಮಾತ್ರ ಸೀಮಿತವಾಗಿದೆ. ಮತ್ತೆ ಕೆಲ ಬಸ್ಗಳು ವಾಹನಗಳನ್ನು ಫಿಟ್ನೆಸ್ ಸರ್ಟಿಫಿಕೇಟ್ಗೆಂದು ಹಾಜರುಪಡಿಸುವ ವೇಳೆ ಫಸ್ಟ್ ಏಡ್ ಕಿಟ್ಗಳನ್ನು ವಾಹನದಲ್ಲಿರಿಸಿದ್ರೂ ಕಾಲ ಕಾಲಕ್ಕೆ ಅದರ ಮಾನ್ಯತೆ ಪರೀಕ್ಷಿಸುವ ಗೋಜಿಗೆ ಹೋಗುವುದಿಲ್ಲ.
ವಾಹನಗಳಲ್ಲಿ ಫಸ್ಟ್ ಏಡ್ ಕಿಟ್ ಕಡ್ಡಾಯವಾಗಿ ಇಟ್ಟುಕೊಳ್ಳಲೇಬೇಕು. ಸಾಮಾನ್ಯ ತಪಾಸಣೆ ವೇಳೆ ಇದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಫಸ್ಟ್ ಏಡ್ ಕಿಟ್ ಇಲ್ಲದಿದ್ದಲ್ಲಿ ದಂಡ ವಿಧಿಸಿ ಕಿಟ್ ಇಡುವಂತೆ ಸೂಚಿಸಲಾಗುತ್ತದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಆರ್ ಎಂ ವರ್ಣೇಕರ್ ಹೇಳಿದ್ದಾರೆ.