ETV Bharat / state

ಸರಣಿ ಹತ್ಯೆ ಹಿನ್ನೆಲೆ: ಶುಕ್ರವಾರ ದ‌ಕ್ಷಿಣ ಕನ್ನಡ ಜಿಲ್ಲೆ ಸಂಜೆಯ ಬಳಿಕ‌ ಸಂಪೂರ್ಣ ಸ್ತಬ್ಧ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶುಕ್ರವಾರದಿಂದ 3 ದಿನಗಳ ಕಾಲ ರಾತ್ರಿ ಬಂದ್​​ಗೆ ಆದೇಶ ನೀಡಿದ್ದಾರೆ. ಹೀಗಾಗಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.

author img

By

Published : Jul 29, 2022, 9:31 PM IST

On Friday Daksina Kannada district was completely quiet after evening
ಶುಕ್ರವಾರ ದ‌ಕ್ಷಿಣ ಕನ್ನಡ ಜಿಲ್ಲೆ ಸಂಜೆಯ ಬಳಿಕ‌ ಸಂಪೂರ್ಣ ಸ್ತಬ್ಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳಲ್ಲಿ 3 ಕೊಲೆಯಾದ ಹಿನ್ನೆಲೆ ಮುನ್ನೆಚ್ಚರಿಕಾ ದೃಷ್ಟಿಯಿಂದ ದ.ಕ.ಜಿಲ್ಲಾಧಿಕಾರಿ ಶುಕ್ರವಾರದಿಂದ 3 ದಿನಗಳ ಕಾಲ ರಾತ್ರಿ ಬಂದ್​​ಗೆ ಆದೇಶ ನೀಡಿದ್ದಾರೆ. ಹೀಗಾಗಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಸಂಜೆ ಆರು ಗಂಟೆಯಾಗುತ್ತಲೇ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ತುರ್ತು ಅಗತ್ಯ ಇರುವ ಸೇವೆಗಳಿಗೆ ಮಾತ್ರ ರಿಯಾಯಿತಿಯಿದ್ದು, ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ 6 ಗಂಟೆಯ ಬಳಿಕ ಜನ ಸಂಚಾರಕ್ಕೂ ನಿಷೇಧ ಹೇರಲಾಗಿದೆ. ಪೊಲೀಸರು ಆದಷ್ಟು ಶೀಘ್ರವೇ ಮನೆಗೆ ಹೋಗುವಂತೆ ಎಲ್ಲ ವಾಹನ ಚಾಲಕರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ.‌ ಅಲ್ಲದೆ ಚೆಕ್ ಪೋಸ್ಟ್​ಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ತಪಾಸಣೆ ಮಾಡುತ್ತಿದ್ದಾರೆ.

ದ‌ಕ್ಷಿಣ ಕನ್ನಡ ಜಿಲ್ಲೆ ಸಂಜೆಯ ಬಳಿಕ‌ ಸಂಪೂರ್ಣ ಸ್ತಬ್ಧ

ಸುರತ್ಕಲ್​‌ನಲ್ಲಿ ಪಥಸಂಚಲನ: ಫಾಜಿಲ್ ಹತ್ಯೆಯ ಬಳಿಕ ಉದ್ವಿಗ್ನಗೊಂಡಿರುವ ಸುರತ್ಕಲ್​ನಲ್ಲಿ ಇಂದು ಸಂಜೆ ಪೊಲೀಸರು ಪಥಸಂಚಲನ ನಡೆಸಿದರು. ಸುರತ್ಕಲ್​ನಿಂದ ಗಣೇಶಪುರದವರೆಗೆ ಪೊಲೀಸ್ ಪಥಸಂಚಲನ ನಡೆಯಿತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿಗಳಾದ ಅಂಶು ಕುಮಾರ್ ಹಾಗೂ ದಿನೇಶ್ ಕುಮಾರ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಸುರತ್ಕಲ್ ಜಂಕ್ಷನ್, ಕೃಷ್ಣಾಪುರ, ಕಾಟಿಪಳ್ಳ, ಗಣೇಶಪುರವರೆಗೆ ಸುಮಾರು 7 ಕಿ.ಮೀ.ದೂರದವರೆಗೆ ಪೊಲೀಸರು ಪಥ ಸಂಚಲನ ನಡೆಸಿದ್ದಾರೆ.

ಇದನ್ನೂ ಓದಿ: ನಮ್ಮ ಸರ್ಕಾರ ಇಸ್ಲಾಮಿಕ್ ಜಿಹಾದಿ ಮಾನಸಿಕತೆ ಇಲ್ಲವಾಗಿಸುವ ಪ್ರತಿಬದ್ಧತೆ ಹೊಂದಿದೆ: 15 ಲಕ್ಷ ಪರಿಹಾರ ಘೋಷಿಸಿದ ತೇಜಸ್ವಿ ಸೂರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.