ಕಡಬ: ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ನಿವೃತ್ತ ಸೈನಿಕರೊಬ್ಬರು ಮಲಗಿದಲ್ಲೆ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ತಾಲೂಕಿನ ನೂಜಿಬಾಳ್ತಿಲ ಕನ್ವರೆ ಸಮೀಪದ ವೇಳಿಕಲ್ ನಿವಾಸಿ ನಿವೃತ್ತ ಸೈನಿಕ ಯೋಹನ್ನಾನ್ (50) ಎಂದು ಗುರುತಿಸಲಾಗಿದೆ. ಯೋಹನ್ನಾನ್ ಅವರು ಕಳೆದ ರಾತ್ರಿಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಯೋಹನ್ನಾನ್ ಮನೆಯಲ್ಲಿ ಒಬ್ಬರೆ ಇದ್ದು, ಕೋಣೆಯಲ್ಲಿ ಲೈಟ್ ಹಾಕಲಾಗಿತ್ತು. ಹಗಲಿನಲ್ಲಿ ಲೈಟ್ ಉರಿಯುತ್ತಿತ್ತು. ಇದರ ಜೊತೆಗೆ ಬಾಗಿಲ ಚಿಲಕ ಹಾಕಿದ್ದರಿಂದ ಸಂಶಯಗೊಂಡು ಸ್ಥಳೀಯರು ಮೃತ ವ್ಯಕ್ತಿಯ ತಮ್ಮನಿಗೆ ವಿಷಯ ತಿಳಿಸಿದ್ದರು. ಬಳಿಕ ಬಾಗಿಲನ್ನು ಒಡೆದು ನೋಡಿದಾಗ ಸೈನಿಕ ಮೃತಪಟ್ಟಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಲ್ಲಿ ಹೆಚ್ಚಿದ ಕೋವಿಡ್.. ಇಂದು 238 ಹೊಸ ಕೇಸ್ ಪತ್ತೆ