ETV Bharat / state

ಸಿಡ್ನಿಯಲ್ಲಿ ನೃತ್ಯ ಮೂಲಕ ಮೋದಿ ಸ್ವಾಗತಿಸಲಿರುವ ಕುಡ್ಲದ ಕುವರಿ: ಕಾಂತಾರ ಸಿನಿಮಾ ಹಾಡಿಗೆ ನಾಟ್ಯ ಪ್ರದರ್ಶನ - etv bharat kannada

ಸಿಡ್ನಿಯಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರನ್ನು ನೃತ್ಯದ ಮೂಲಕ ಸ್ವಾಗತ ಕೋರುವ ತಂಡದಲ್ಲಿ ಮಂಗಳೂರಿನ ಯುವತಿ ಪಾಲ್ಗೊಳ್ಳಲಿದ್ದಾರೆ.

pm-modi-will-be-welcomed-with-dance-in-sydney-by-mangalore-girl
ಸಿಡ್ನಿಯಲ್ಲಿ ಪ್ರಧಾನಿ ಮೋದಿಯನ್ನು ನೃತ್ಯ ಮೂಲಕ ಸ್ವಾಗತಿಸಲಿರುವ ಕುಡ್ಲದ ಕುವರಿ: ಕಾಂತಾರ ಸಿನಿಮಾ ಹಾಡಿಗೆ ನಾಟ್ಯ ಪ್ರದರ್ಶನ
author img

By

Published : May 22, 2023, 9:20 PM IST

Updated : May 22, 2023, 10:54 PM IST

ಸಿಡ್ನಿಯಲ್ಲಿ ನೃತ್ಯ ಮೂಲಕ ಮೋದಿ ಸ್ವಾಗತಿಸಲಿರುವ ಕುಡ್ಲದ ಕುವರಿ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಸಿಡ್ನಿಯ ಇಂಡಿಯನ್ ಆಸ್ಟ್ರೇಲಿಯನ್ ಡಯಾಸ್ಪೊರ ಫೌಂಡೇಶನ್ (IADF) ಭರದಿಂದ ಸಿದ್ಧತೆ ನಡೆಸಿಕೊಂಡಿದೆ. 20,000ಕ್ಕೂ ಅಧಿಕ ಜನರು ವೀಕ್ಷಸಲಿರುವ ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸಲಿದ್ದು, ಅವರಿಗೆ ನೃತ್ಯದ ಮೂಲಕ ಸ್ವಾಗತ ಕೋರುವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧುಷಿ ಪಲ್ಲವಿ ಭಾಗವತ್ ಅವರು ತಮ್ಮ ನೃತ್ಯ ಸಂಸ್ಥೆ ನಾಟ್ಯೋಕ್ತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲ್ಲಿದ್ದಾರೆ. ಅವರ ತಂಡದಲ್ಲಿ ಮಂಗಳೂರಿನ ಅನಿಶಾ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ.

ಅವರು ಕಾಂತಾರ ಸಿನಿಮಾದ ಹಾಡುಗಳ ಮೂಲಕ ಮನರಂಜಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ನೃತ್ಯ ಹಾಗೂ ಯಕ್ಷಗಾನದ ಸೊಬಗನ್ನು ಅಳವಡಿಸಿದ ಈ ನೃತ್ಯದಲ್ಲಿ ಉಡುಪಿ, ಮಂಗಳೂರು ಸೇರಿದಂತೆ ದೇಶ ಹಾಗೂ ಅಂತಾರಾಷ್ಟ್ರೀಯ ಕಲಾವಿದರ ತಂಡ ಪಾಲ್ಗೊಳ್ಳಲಿದೆ. ಶ್ರೀ ನಾಟ್ಯನಿಲಯಮ ಮಂಜೆಶ್ವರ್ ಹಾಗೂ ಕರ್ನಾಟಕ ಕಲಾಶ್ರೀ ವಿಧುಷಿ ಕಮಲಾ ಭಟ್ ಬಳಿ ತಮ್ಮ ಭರತನಾಟ್ಯ ವಿಧ್ವತ್ ಪೂರೈಸಿದ ಪಲ್ಲವಿ ಅವರು ಐಟಿಯಲ್ಲಿ ಕಾರ್ಯ ನಿರ್ವಹಿಸುತ್ತಾ ತಮ್ಮ ಭರತನಾಟ್ಯ ಸಂಸ್ಥೆಯನ್ನ ಹಲವು ವರ್ಷಗಳಿಂದ ಸಿಡ್ನಿಯಲ್ಲಿ ನಡೆಸುತ್ತಿದ್ದಾರೆ.

ಮೇ. 23ರಂದು ಪ್ರಧಾನಿ ಮೋದಿಯವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರೊಂದಿಗೆ ಸಿಡ್ನಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಲ್ಲವಿ ಅವರು ನಾಟ್ಯ ಪ್ರದರ್ಶನ ಮಾಡಲಿದ್ದಾರೆ. ಇದರಲ್ಲಿ ಮಂಗಳೂರು ಮೂಲದ ಬಿಜೈ ಮೂಲದ ಯುವತಿ ಅನೀಶಾ ಪೂಜಾರಿ ಅವರನ್ನು ಒಳಗೊಂಡ ನೃತ್ಯ ತಂಡವು ಈ ನೃತ್ಯ ಪ್ರದರ್ಶನ ಮಾಡಲಿದೆ.

ಈ ತಂಡದಲ್ಲಿ ಅನೀಶಾ ಪೂಜಾರಿಯೂ ತಮ್ಮ ನೃತ್ಯ ಚಾತುರ್ಯವನ್ನು ಪ್ರದರ್ಶಿಸಲಿದ್ದಾರೆ. ತಮ್ಮ ನಾಲ್ಕನೇ ವಯಸ್ಸಿಗೆ ಭರತನಾಟ್ಯ ಕಲೆಯನ್ನು ಕಲಿಯಲು ತೊಡಗಿದ ಅವರು ವಿದ್ವಾನ್ ಪ್ರೇಮನಾಥ ಮಾಸ್ಟರ್ ರಲ್ಲಿ ಹೆಚ್ಚಿನ ಶಿಕ್ಷಣ ಪಡೆದ್ದಾರೆ. ರಾಜ್ಯ ಹೊರರಾಜ್ಯಗಳಲ್ಲೂ ನಾಟ್ಯ ಪ್ರದರ್ಶನ ಮಾಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿವಾಹದ ಬಳಿಕ ಪತಿ ಮಗುವಿನೊಂದಿಗೆ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಆ ಬಳಿಕವೂ ತಮ್ಮ ನೃತ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ. ಇದೀಗ ಅವರು ನಾಟ್ಯ ವಿದುಷಿ ಪಲ್ಲವಿ ಭಾಗವತ್ ರೊಂದಿಗೆ ತಮ್ಮ ನಾಟ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ.

ಈ ಬಗ್ಗೆ ಅನಿಶಾ ಪೂಜಾರಿ ತಂದೆ ಪದ್ಮನಾಭ ಮಾತನಾಡಿ, ಮಗಳು ಅನಿಶಾ ಕಳೆದ 6 ವರ್ಷದಿಂದ ಸಿಡ್ನಿಯಲ್ಲಿ ವಾಸ ಮಾಡುತ್ತಿದ್ದಾಳೆ. ಅನಿಶಾಳಿಗೆ ಬಾಲ್ಯದಿಂದಲೂ ನೃತ್ಯ ಮಾಡುವುದೆಂದರೆ ಆಸಕ್ತಿ. ನಾಲ್ಕನೇ ವರ್ಷದಿಂದಲೂ ವಿವಿಧ ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ. ತಮ್ಮ ಗುರುಗಳಾದ ಪ್ರೇಮನಾಥ್ ಅವರ ಮೂಲಕ ದೇಶದ ವಿವಿಧ ನಗರಗಳಿಗೆ ತೆರಳಿ ನೃತ್ಯ ಪ್ರದರ್ಶನ ಮಾಡಿದ್ದಾಳೆ. ಸಿಡ್ನಿಯಲ್ಲಿರುವ ಮಗಳಿಗೆ ಪ್ರಧಾನಮಂತ್ರಿಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಅವಕಾಶ ಸಿಕ್ಕಿದೆ. ಅವಳ ಗುರುಗಳಾದ ಪಲ್ಲವಿ ಅವರ ಮೂಲಕ ಈ ನೃತ್ಯ ಮಾಡುತ್ತಿದ್ದಾರೆ. ನಮ್ಮ ದೇಶದ ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮುಂದೆ ನೃತ್ಯ ಮಾಡುವುದು ಸಣ್ಣ ವಿಚಾರವಲ್ಲ. ಮಗಳ ಸಾಧನೆ ಖುಷಿ ತಂದಿದೆ ಎಂದರು.

ಇದನ್ನೂ ಓದಿ:ಫಿಜಿ, ಪಪುವಾ ನ್ಯೂಗಿನಿ ದೇಶಗಳಿಂದ ಪ್ರಧಾನಿ ಮೋದಿಗೆ 'ಅತ್ಯುನ್ನತ ಗೌರವ'!

Last Updated : May 22, 2023, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.