ETV Bharat / state

ಶಾಲೆ ಗೋಡೆಯಲ್ಲಿ ಲಗೋರಿ ಸೇರಿ ಹಳೆಯ ಕ್ರೀಡೆಯ ರಂಗು: ಶಿಕ್ಷಣಾಧಿಕಾರಿಯ ಸ್ವಂತ ಖರ್ಚಿನಲ್ಲಿ ಶಾಲೆಗೆ ಕಲಾತ್ಮಕ ಸ್ಪರ್ಶ

author img

By

Published : Nov 17, 2021, 10:17 PM IST

Updated : Nov 18, 2021, 8:26 PM IST

ಸುರತ್ಕಲ್ ಹೊಸಬೆಟ್ಟುವಿನಲ್ಲಿರುವ ಸರ್ಕಾರಿ ಶಾಲೆಯ ಗೋಡೆಗಳಲ್ಲಿ ಹಳೆ ಕಾಲದ‌ ಮಕ್ಕಳು ಆಡುತ್ತಿದ್ದ ಲಗೋರಿ, ಚಿನ್ನಿದಾಂಡು, ಕಣ್ಣಾಮುಚ್ಚಾಲೆ, ಜೋಕಾಲಿ ಮೊದಲಾದ ಆಟಗಳ ಚಿತ್ರಗಳನ್ನು ಬಿಡಿಸಿ ಶಾಲೆಯನ್ನು ಆಕರ್ಷಣೀಯಗೊಳಿಸಲಾಗಿದೆ.

ಶಾಲೆಯ ಗೋಡೆಯಲ್ಲಿ ಹಳೆಕಾಲದ ಕ್ರೀಡೆಯ ರಂಗು

ಮಂಗಳೂರು: ಸರ್ಕಾರಿ ಶಾಲೆಗಳೆಂದರೆ ಅದೇ ಹಳೆಯ ಕಟ್ಟಡ, ಬಣ್ಣ ಹೋದ ಗೋಡೆಗಳ ಕಲ್ಪನೆ ಎದುರಿಗೆ ಬರುತ್ತದೆ. ಆದರೆ ಇಂತಹ ತಾನು ಕಲಿತ ಶಾಲೆಯೊಂದನ್ನು ಕಲಾತ್ಮಕವಾಗಿ ಮೂಡಿಸಬೇಕೆಂದು ಶಿಕ್ಷಣಾಧಿಕಾರಿಯೊಬ್ಬರು ಕನಸು ಕಂಡು ಅದನ್ನು ಈಡೇರಿಸಿಕೊಂಡಿದ್ದಾರೆ. ಸುರತ್ಕಲ್ ಹೊಸಬೆಟ್ಟುವಿನಲ್ಲಿರುವ ಸರ್ಕಾರಿ ಶಾಲೆ ಇದೀಗ ವಿವಿಧ ರೀತಿಯ ಕಲೆಗಳಿಂದ ಆಕರ್ಷಕವಾಗಿ ಕಾಣುತ್ತಿದೆ.

ಈ ಶಾಲೆಯ ಗೋಡೆಯನ್ನು ಕಂಡರೆ ಹಳೆ ಕಾಲದ‌ ಮಕ್ಕಳು ಆಡುತ್ತಿದ್ದ ಲಗೋರಿ, ಚಿನ್ನಿದಾಂಡು, ಕುಟ್ಟಿದೊನ್ನೆ, ಕಣ್ಣಾಮುಚ್ಚಾಲೆ, ಜೋಕಾಲಿ ಮೊದಲಾದ ಆಟದ ಚಿತ್ತಾರಗಳು ಕಾಣಿಸುತ್ತದೆ. ಇಷ್ಟು ಮಾತ್ರವಲ್ಲದೇ ಕೃಷಿ, ಹಾಲು ಕರೆಯುವುದು ಮೊದಲಾದ ಚಿತ್ರಗಳು ಕಾಣಿಸುತ್ತದೆ. ಹೊಸಬೆಟ್ಟುವಿನ ಶಾಲೆಯ ಗೋಡೆಯ ಮೇಲೆ ಈ ಬಣ್ಣದ ಚಿತ್ರಗಳು ಮೂಡಲು ಕಾರಣವಾದದ್ದು ಮಂಗಳೂರಿನ ಡಿಡಿಪಿಐ ಕಚೇರಿಯಲ್ಲಿ ಇಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಯಾವತಿ ಅವರು. ಅವರು ವಿದ್ಯಾಭ್ಯಾಸ ಮಾಡಿದ ಈ ಸರ್ಕಾರಿ ಶಾಲೆಯನ್ನು ಈ ರೀತಿ ಆಕರ್ಷಕವಾಗಿ ಮಾಡಬೇಕೆಂಬ ಕನಸು ಕಂಡು ಅವರು ಈ ಕಾರ್ಯ ಮಾಡಿಸಿದ್ದಾರೆ. ಇದಕ್ಕಾಗಿ ತಮ್ಮ ದುಡಿಮೆಯ 2.5 ಲಕ್ಷ ರೂ. ಹಣವನ್ನು ಇದಕ್ಕಾಗಿ ಖರ್ಚು ಮಾಡಿದ್ದಾರೆ.

ಶಾಲೆ ಗೋಡೆಯಲ್ಲಿ ಲಗೋರಿ ಸೇರಿ ಹಳೆಯ ಕ್ರೀಡೆಯ ರಂಗು

ಶಿಕ್ಷಣಾಧಿಕಾರಿ ದಯಾವತಿ ಅವರು ಈ ಶಾಲೆಗೆ ಕಲಾತ್ಮಕ ಟಚ್ ನೀಡಿರುವುದು ಶಾಲೆಯ ಅಂದವನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳಿಗೆ ಇಲ್ಲಿರುವ ಚಿತ್ರಗಳ ಮೂಲಕ ಹಿರಿಯರು ಮಕ್ಕಳಿದ್ದ ಸಂದರ್ಭದಲ್ಲಿ ಆಡುತ್ತಿದ್ದ ಆಟಗಳ ಪರಿಚಯವಾಗಿದೆ.ಜೊತೆಗೆ ಚಿತ್ರಗಳು ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಮೂಡಿಸಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ.

ಈಗಿನ ವಿದ್ಯಾರ್ಥಿಗಳು ಮೊಬೈಲ್ ಇಂಟರ್ನೆಟ್ ಮೂಲಕ ಪಬ್ಜಿಯಂತಹ ಆಟಗಳಲ್ಲಿ ತಲ್ಲೀನರಾಗಿದ್ದಾರೆ. ಅವರಿಗೆ ಹಿಂದಿನ ಮಕ್ಕಳು ಯಾವ ರೀತಿಯ ಆಟವಾಡುತ್ತಿದ್ದರು, ದೈಹಿಕವಾಗಿ ಸದೃಢರಾಗುತ್ತಿದ್ದರು ಎಂಬುದು ತಿಳಿದಿಲ್ಲ. ಈ ಚಿತ್ರಗಳ ಮೂಲಕ ಅವರಿಗೆ ಹಿಂದಿನ ಮಕ್ಕಳ ಆಟಪಾಠಗಳ ಪರಿಚಯ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಕಲಾ ಶಿಕ್ಷಕರು.

old sports paintings in hosabettu government school wall
ಶಾಲೆಯ ಗೋಡೆಯಲ್ಲಿ ಹಳೆಕಾಲದ ಕ್ರೀಡೆಯ ರಂಗು

ಸರ್ಕಾರಿ ಶಾಲೆಗೆ ಈ ಕಲಾತ್ಮಕ ಟಚ್ ನೀಡಲು ಮಂಗಳೂರಿನ 17 ಕಲಾಶಿಕ್ಷಕರು ಶ್ರಮಿಸಿದ್ದಾರೆ. ಇನ್ನೂ ಒಂದು ಗೋಡೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರ ಬರೆಯಲು ಅವಕಾಶ ನೀಡಲಾಗಿದ್ದು ಅವರು ಗೋಡೆಯಲ್ಲಿ ತಮ್ಮ ಕಲಾಪ್ರತಿಭೆ ತೋರಿಸಿದ್ದಾರೆ.

Last Updated : Nov 18, 2021, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.