ETV Bharat / state

’ಚಂದನವನದಲ್ಲಿ ಬೆಳೆಗಿಂತ ಕಳೆಯೇ ಹೆಚ್ಚು’ ಹೀಗೆಂದು ಬೇಸರ ವ್ಯಕ್ತಪಡಿಸಿದ ಆ ಪ್ರಸಿದ್ಧ ನಿರ್ದೇಶಕ

ನಿರ್ದೇಶಕ ಹಾಗೂ ನಿರ್ಮಾಪಕನಿಗೆ ಹೊಣೆಗಾರಿಕೆ ಇದ್ದರೆ ಮಾತ್ರ ಉತ್ತಮ ಗುಣಮಟ್ಟದ ಚಲನಚಿತ್ರ ಮೂಡಿಬರಲು ಸಾಧ್ಯ. ಆದ್ದರಿಂದ ಇಂದು ಕನ್ನಡ ಸಿನಿಮಾಗಳ ಸಂಖ್ಯೆ ಕಡಿಮೆ ಆಗಬೇಕು. ಆದರೆ, ಕೇವಲ ಸಂಖ್ಯೆ ಮಾತ್ರ ಕಡಿಮೆಯಾಗುವುದಲ್ಲ. ಗುಣಮಟ್ಟ ಹೆಚ್ಚಾಗಿ ಸಂಖ್ಯೆ ಕಡಿಮೆಯಾಗಬೇಕು ಎಂದ ನಾಗತಿಹಳ್ಳಿ ಚಂದ್ರಶೇಖರ್.

ನಾಗತಿಹಳ್ಳಿ ಚಂದ್ರಶೇಖರ್
author img

By

Published : Aug 3, 2019, 12:15 PM IST

ಮಂಗಳೂರು: ಕನ್ನಡದಲ್ಲಿ ಈ ವರ್ಷ ಹಿಂದಿಗಿಂತ ಅಧಿಕ ಚಲನಚಿತ್ರ ನಿರ್ಮಾಣವಾಗಿದೆ. ಇದಕ್ಕೆ ಎದೆಯುಬ್ಬಿಸಿ ಮೆರೆಯಬೇಕೋ ಅಥವಾ ಆತಂಕ ಪಡಬೇಕೋ ಗೊತ್ತಿಲ್ಲ. ಇದರಿಂದ ಬೆಳೆಗಿಂತ ಕಳೆ ವೇಗವಾಗಿ ಬರುವ ಅಪಾಯವಿದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಡಿಸಿದರು.

ಕನ್ನಡ ಸಿನಿಮಾ ನಿರ್ಮಾಣದಲ್ಲಿ‌ ಬೆಳೆಗಿಂತ ಕಳೆಯೇ ಅಧಿಕವಿದೆ: ನಾಗತಿಹಳ್ಳಿ ಚಂದ್ರಶೇಖರ್

ನಗರದ ಮಿನಿ ವಿಧಾನಸೌಧದ ಬಳಿಯಿರುವ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ವಾರಕ್ಕೆ ನಾಲ್ಕರಿಂದ ಐದು ಚಲನಚಿತ್ರಗಳು ನಿರ್ಮಾಣವಾಗುತ್ತದೆ. ಕೆಲವೊಂದರ ಹೆಸರೇ ಗೊತ್ತಿರುವುದಿಲ್ಲ. ಮೊದಲ ದಿನವೇ ಚಲನಚಿತ್ರ ಮಂದಿರದಿಂದ ಹೊರಬೀಳುವ ಚಿತ್ರಗಳಿವೆ. ದುರಂತ ಎಂದರೆ ಕನ್ನಡದ ಹಾದಿಯಲ್ಲಿ ತುಳು ಕೂಡ ಹೆಚ್ಚು ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿವೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಖೇದ ವ್ಯಕ್ತಪಡಿಸಿದರು.

ತಮ್ಮ ಇಂಡಿಯಾ v/s ಇಂಗ್ಲೆಂಡ್​ ಹೊಸ ಚಲನಚಿತ್ರದ ಬಗ್ಗೆ ಮಾತನಾಡಿ, ಈ ಚಲನಚಿತ್ರ ನನ್ನ ಮಗಳು ಬರೆದ attitude & longitude ಕಾದಂಬರಿ ಆಧಾರಿತವಾಗಿದ್ದು, ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ಮಾಡಿದ್ದರು. ಅದರ ಮರುರೂಪವನ್ನು ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದ ಬಹುಭಾಗವನ್ನು ಇಂಗ್ಲೆಂಡ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಸಾಹತುಶಾಹಿ ಕಾಲದಿಂದ ಭಾರತಕ್ಕೆ ಆದ ಸಾಧಕ-ಬಾಧಕಗಳೇನು ಎಂಬ ಚರ್ಚೆಯನ್ನು, ಚರಿತ್ರೆಯನ್ನು ಪುನರ್ ಭೇಟಿಯಾಗುವ ಕಥಾವಸ್ತುವನ್ನು ಇರಿಸಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನನ್ನ ಮಹತ್ವಾಕಾಂಕ್ಷೆಯುಳ್ಳ ಸಿನಿಮಾ ಎಂದು ತಿಳಿಸಿದರು.

ತುಳುಚಿತ್ರರಂಗದ ಡಾ.ರಿಚರ್ಡ್ ಕ್ಯಾಸ್ಟಲಿನೋ ತುಳು, ಕನ್ನಡ, ಕೊಡವ, ಕೊಂಕಣಿ ಭಾಷೆಗಳಲ್ಲಿ ಚಲನಚಿತ್ರವನ್ನು ಮಾಡಿದವರು. ಮಂಗಳೂರಿನಂತಹ ಸ್ಥಳದಲ್ಲಿದ್ದುಕೊಂಡು ನಾಲ್ಕು ಭಾಷೆಗಳಲ್ಲಿ ಚಲನಚಿತ್ರ ತಯಾರಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಆದ್ದರಿಂದ ಡಾ.ರಿಚರ್ಡ್ ಕ್ಯಾಸ್ಟಲಿನೋ ಅವರ ಊರಿನಲ್ಲಿಯೇ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಾಳೆ ರಿಚರ್ಡ್‌ ಕ್ಯಾಸ್ಟಲಿನೋ ಅವರ ಸಾಧನೆಯ ಬಗ್ಗೆ ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನ ಮಾಡಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತದೆ. ಇದೇ ಸಂದರ್ಭ ರಿಚರ್ಡ್ ಕ್ಯಾಸ್ಟಲಿನೋ ದಂಪತಿಗಳನ್ನು ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

Intro:ಮಂಗಳೂರು: ಕನ್ನಡದಲ್ಲಿ ಈ ವರ್ಷ ಹಿಂದಿಗಿಂತ ಅಧಿಕ ಚಲನಚಿತ್ರ ನಿರ್ಮಾಣವಾಗಿದೆ. ಇದಕ್ಕೆ ಎದೆಯುಬ್ಬಿಸಿ ಮೆರೆಯಬೇಕೋ ಅಥವಾ ಆತಂಕ ಪಡಬೇಕೋ ಗೊತ್ತಿಲ್ಲ. ಇದರಿಂದ ಬೆಳೆಗಿಂತ ಕಳೆ ವೇಗವಾಗಿ ಬರುವ ಅಪಾಯವಿದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಡಿಸಿದರು.

ನಗರದ ಮಿನಿವಿಧಾನ ಸೌಧದ ಬಳಿಯಿರುವ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ವಾರಕ್ಕೆ ನಾಲ್ಕರಿಂದ ಐದು ಚಲನಚಿತ್ರಗಳು ನಿರ್ಮಾಣವಾಗುತ್ತದೆ. ಕೆಲವೊಂದರ ಹೆಸರೇ ಗೊತ್ತಿರುವುದಿಲ್ಲ‌. ಮೊದಲದಿನವೇ ಚಲನಚಿತ್ರ ಮಂದಿರದಿಂದ ಹೊರಬೀಳುವ ಚಿತ್ರಗಳಿವೆ. ದುರಂತ ಎಂದರೆ ಕನ್ನಡದ ಹಾದಿಯಲ್ಲಿ ತುಳು ಕೂಡಾ ಹೆಚ್ಚು ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿವೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಖೇದ ವ್ಯಕ್ತಪಡಿಸಿದರು.

Body:ತಾಂತ್ರಿಕತೆಯ ಬೃಹತ್ ಮಟ್ಟದ ಬೆಳವಣಿಗೆಯೇ ಇದಕ್ಕೆಲ್ಲಾ ಕಾರಣ. ತಮಗೆ ಹಸ್ತಗತವಾಗಿರುವ ಈ ಕಲೆಯನ್ನು ಈ ರೀತಿ ದುರುಪಯೋಗ ಪಡಿಸಿದರೆ. ಇನ್ನು ಕೆಲವರು ಸರಕಾರದ ಸೌಲಭ್ಯಗಳನ್ನು ಕಂಡು ಸಿನಿಮಾ ಮಾಡುತ್ತಿದ್ದಾರೆ. ಇದು ಕೂಡಾ ಅಪಾಯಕಾರಿ. ನಿರ್ದೇಶಕ ಹಾಗೂ ನಿರ್ಮಾಪಕನಿಗೆ ಹೊಣೆಗಾರಿಕೆ ಇದ್ದರೆ ಮಾತ್ರ ಉತ್ತಮ ಗುಣಮಟ್ಟದ ಚಲನಚಿತ್ರ ಮೂಡಿಬರಲು ಸಾಧ್ಯ. ಆದ್ದರಿಂದ ಇಂದು ಕನ್ನಡ ಸಿನಿಮಾಗಳ ಸಂಖ್ಯೆ ಕಡಿಮೆ ಆಗಬೇಕು. ಆದರೆ ಕೇವಲ ಸಂಖ್ಯೆ ಮಾತ್ರ ಕಡಿಮೆಯಾಗುವುದಲ್ಲ. ಗುಣಮಟ್ಟ ಹೆಚ್ಚಾಗಿ ಸಂಖ್ಯೆ ಕಡಿಮೆಯಾಗಬೇಕು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ವಲಸೆ ಎಂಬ ಕಥಾವಸ್ತುವನ್ನು ಇರಿಸಿ ಬಹಳಷ್ಟು ಚಲನಚಿತ್ರಗಳು ಬರುತ್ತಿವೆ‌. ವಲಸಿಗರನ್ನು ದೇಶದ್ರೋಹಿಗಳೆಂದು ನೋಡಬೇಕಾ ಅಥವಾ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕಾ ಎಂಬ ಚರ್ಚೆ ಇಂದು ಪ್ರಪಂಚಾದ್ಯಂತ ನಡೆಯುತ್ತಿದೆ. ಸಿರಿಯಾದಿಂದ ಹೋದವರಿಗೆ ಜರ್ಮನಿ‌ ಆಶ್ರಯ ಕೊಟ್ಟಿತು. ಇಂತಹ ಸಂದರ್ಭಗಳಲ್ಲಿ ಈ ರೀತಿಯ ಕಥಾವಸ್ತು ವನ್ನು ಇರಿಸಿ ಚಲನಚಿತ್ರ ನಿರ್ಮಾಣ ಮಾಡುವ ಸವಾಲುಗಳ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

Conclusion:ತಮ್ಮ ಇಂಡಿಯಾ v/s ಇಂಗ್ಲೇಂಡ್ ಹೊಸ ಚಲನಚಿತ್ರದ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈ ಚಲನಚಿತ್ರ ನನ್ನ ಮಗಳು ಬರೆದ attitude & longitude ಕಾದಂಬರಿ ಆಧಾರಿತವಾಗಿದ್ದು, ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ಮಾಡಿದ್ದರು. ಅದರ ಮರುರೂಪವನ್ನು ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದ ಬಹುಭಾಗವನ್ನು ಇಂಗ್ಲೇಂಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಸಾಹತುಶಾಹಿ ಕಾಲದಿಂದ ಭಾರತಕ್ಕೆ ಆದ ಸಾಧಕ-ಬಾಧಕಗಳೇನು ಎಂಬ ಚರ್ಚೆಯನ್ನು, ಚರಿತ್ರೆಯನ್ನು ಪುನರ್ ಭೇಟಿಯಾಗುವ ಕಥಾವಸ್ತು ವನ್ನು ಇರಿಸಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನನ್ನ ಮಹತ್ವಾಕಾಂಕ್ಷೆಯುಳ್ಳ ಸಿನಿಮಾ ಇದು. ವಸಿಷ್ಠ ಸಿಂಹ ಮಾನ್ವಿತಾ, ಅನಂತ್‌ನಾಗ್, ಸುಮಲತಾ, ಪ್ರಕಾಶ್ ಬೆಳವಾಡಿಯವರ ತಾರಾಗಣ ಇದೆ. ಅರ್ಜುನ್ ಜನ್ಯ ಸಂಗೀತವಿದೆ. ಅಲ್ಲದೆ ಕನ್ನಡ, ತಮಿಳು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಗೊಂಡಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

Reporter_Vishwanath Panjimogaru
ETV Bharat Logo

Copyright © 2024 Ushodaya Enterprises Pvt. Ltd., All Rights Reserved.