ಪುತ್ತೂರು : ಇಲ್ಲಿನ ದರ್ಬೆಯ ಫಾಸ್ಟ್ಫುಡ್ ತಯಾರಿಕಾ ಕೇಂದ್ರವೊಂದಕ್ಕೆ ನಗರಸಭಾ, ಆರೋಗ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಫಾಸ್ಟ್ಫುಡ್ ತಯಾರಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಪುತ್ತೂರು ನಗರಸಭೆಯ ಪರಿಸರ ಅಭಿಯಂತರರಾದ ಗುರುಪ್ರಸಾದ್, ಆರೋಗ್ಯ ಇಲಾಖೆಯ ರಾಮಚಂದ್ರ ಹಾಗೂ ಶ್ವೇತಾ ಕಿರಣ್ ಅವರು ದರ್ಬೆಯ ಶರ್ಮಾ ಕಾರ್ನರ್ ಫಾಸ್ಟ್ಫುಡ್ ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದರು.
ದಾಳಿ ವೇಳೆ ಫಾಸ್ಟ್ಫುಡ್ ಘಟಕದ ಒಳಗಡೆ ಗಲೀಜು ಕಂಡು ಬಂದಿದ್ದು, ಸ್ವಚ್ಛತೆಯ ಬಗ್ಗೆ ನಿಗಾ ವಹಿಸಿಲ್ಲ. ಇದರ ಜೊತೆ ನಗರಸಭೆಯಿಂದ ವ್ಯಾಪಾರದ ಪರವಾನಿಗೆ ಪಡೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ತಕ್ಷಣದಿಂದಲೇ ಈ ಕೇಂದ್ರವನ್ನು ಸ್ಥಗಿತಗೊಳಿಸುವಂತೆ ಮಾಲೀಕ ನಿಸಾರ್ ಕೂರ್ನಡ್ಕ ಅವರಿಗೆ ಸೂಚಿಸಿದ್ದಾರೆ.