ಬೆಳ್ತಂಗಡಿ: ಯಕ್ಷಗಾನದಿಂದಲೇ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಹಾಗೂ ನೇಪಥ್ಯ ಕಲಾವಿದರಿಗೆ ಶಾಸಕ ಹರೀಶ್ ಪೂಂಜಾ ನೆರವಾಗಿದ್ದಾರೆ.
![Mla Harish Poonja helped to Yakshagana artists](https://etvbharatimages.akamaized.net/etvbharat/prod-images/6941855_763_6941855_1587833593732.png)
ತಾಲೂಕಿನ ಸುಮಾರು 150 ಕಲಾವಿದರಿಗೆ ‘ಶ್ರಮಿಕ ನೆರವು’ ಆಹಾರ ಸಾಮಗ್ರಿ ಕಿಟ್ಗಳನ್ನು ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಮೂಲಕ ವಿತರಿಸಿದರು.
ಸುಂಕದಕಟ್ಟೆ ಮೇಳದ ಸುಮಾರು 20 ಕಲಾವಿದರಿಗೆ ಹಿರಿಯ ಕಲಾವಿದ ಶಿತಿಕಂಠ ಭಟ್ ಉಜಿರೆ ಹಾಗೂ ಹಿಮ್ಮೇಳ ವಾದಕ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರ ವಿನಂತಿಯಂತೆ ತಲಾ 1 ಸಾವಿರದಿಂದ 2 ಸಾವಿರದವರೆಗೆ ಸಹಾಯಧನವನ್ನು ನೀಡುವುದರ ಮೂಲಕ ಶಾಸಕರು ಕಲಾವಿದರಿಗೆ ನೆರವಾಗಿದ್ದಾರೆ.
ಎಲ್ಲಾ ಜನಪ್ರತಿನಿಧಿಗಳು ಆಯಾ ಕ್ಷೇತ್ರದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಶಾಸಕರ ಈ ಕಾರ್ಯಕ್ಕೆ ಕಲಾವಿದರು, ಮೇಳದ ವ್ಯವಸ್ಥಾಪಕರು ಧನ್ಯವಾದ ಅರ್ಪಿಸಿದ್ದಾರೆ.