ಮಂಗಳೂರು: ನಗರದ ಅತ್ತಾವರದ ಬಿಗ್ ಬಜಾರ್ ಬಳಿ ದೊರಕಿದ 10 ಸಾವಿರ ರೂ. ನಗದು ಹಾಗೂ ವಿವಿಧ ಕಾರ್ಡ್ಗಳಿದ್ದ ಪರ್ಸ್ ಅನ್ನು ಮರಳಿ ನೀಡುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ವಿದ್ಯಾರ್ಥಿ ದುಶ್ಯಂತ್ ಎಂಬುವನಿಗೆ ಸೇರಿದ ಪರ್ಸ್ ಅನ್ನು ಮರಳಿ ನೀಡಿ ಆಟೋ ಚಾಲಕ ಹನೀಫ್ ಪ್ರಾಮಾಣಿಕತೆ ಮೆರೆದಿದ್ದಾರೆ. ಬಿಗ್ ಬಜಾರ್ ಬಳಿ ಸಿಕ್ಕ ಪರ್ಸ್ ಅನ್ನು ಹನೀಫ್ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ನೀಡಿದ್ದು, ಪೊಲೀಸರು ತನಿಖೆ ನಡೆಸಿ ವಾರಸುದಾರ ದುಶ್ಯಂತ್ಗೆ ಮರಳಿಸಿದ್ದಾರೆ. ಪರ್ಸ್ನಲ್ಲಿ 10,200 ರೂ. ಜೊತೆ ಚಿಲ್ಲರೆ ಹಣವಿತ್ತು. ಇದರೊಂದಿಗೆ ಡೆಬಿಟ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಐಡಿ ಕಾರ್ಡ್ಗಳಿದ್ದವು.
ಆಟೋ ಚಾಲಕ ಹನೀಫ್ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹನೀಫ್ ಅವರನ್ನು ಪ್ರಶಂಸಿಸಿ ಸನ್ಮಾನ ಮಾಡಿದ್ದಾರೆ. ಜೊತೆಗೆ ಸಾರ್ವಜನಿಕರಿಂದಲೂ ಸಹ ಶ್ಲಾಘನೆ ವ್ಯಕ್ತವಾಗುತ್ತಿದೆ.