ETV Bharat / state

ಸಂಚಾರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಯುವಕನ ಬಂಧನ

ಮಂಗಳೂರು ನಗರದಲ್ಲಿ ಟ್ರಾಫಿಕ್​ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

man who  disruption to traffic police dut y detained in mangalore
ಯುವಕ ದಸ್ತಗಿರಿ
author img

By

Published : Apr 17, 2021, 8:44 PM IST

ಮಂಗಳೂರು: ನಗರದ ಬಲ್ಮಠದಲ್ಲಿ ನಿನ್ನೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಸಂಚಾರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಯುವಕನೋರ್ವನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಯುವಕನ ದಸ್ತಗಿರಿ

ನಗರದ ಎಕ್ಕೂರು ನಿವಾಸಿ ಜಗತ್ ಎಂಬಾತ ದಸ್ತಗಿರಿಯಾದ ಯುವಕ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಪ್ರತಿಕ್ರಿಯಿಸಿ, ಜಗತ್ ನಿನ್ನೆ ಮಧ್ಯಾಹ್ನ ನಗರದ ಬಲ್ಮಠ ಸರ್ಕಲ್​​ನಲ್ಲಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆ. ಈ ಸಂದರ್ಭ ಅಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರು ಸಂಚಾರಿ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಯಶವಂತ ರಾಥೋಡ್‌ ಪ್ರಶ್ನಿಸಿದ್ದಾರೆ. ಆಗ ಆತ ಸಿಬ್ಬಂದಿ ಜೊತೆ ರಸ್ತೆಯಲ್ಲಿಯೇ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಬಗ್ಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇಂದು ಆತನನ್ನು ದಸ್ತಗಿರಿ ಮಾಡಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.