ETV Bharat / state

ಮದುವೆಗೆ ನಾಲ್ಕೇ ದಿನ ಬಾಕಿ ಇತ್ತು: ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ - ಹುಬ್ಬಳ್ಳಿ ಲೇಟೆಸ್ಟ್​​ ಕ್ರೈಂ ನ್ಯೂಸ್​

ಕತ್ತು ಹಿಸುಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.

Man murdered in hubli
ನಿಂಗಪ್ಪ ಬೂದಪ್ಪ ನವಲೂರ- ಕೊಲೆೆಯಾದ ವ್ಯಕ್ತಿ
author img

By

Published : Jun 2, 2023, 10:09 AM IST

Updated : Jun 2, 2023, 11:00 AM IST

ಹುಬ್ಬಳ್ಳಿ: ಹಸೆಮಣೆ ಏರಬೇಕಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಬೂದಪ್ಪ ನವಲೂರ (28) ಕೊಲೆೆಯಾದ ವ್ಯಕ್ತಿ. ದುಷ್ಕರ್ಮಿಗಳು ತೋಟದ ಮನೆಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಬಳಿಕ ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದೆ. ತಾವರಗೇರೆ ಗ್ರಾಮದ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಜೂನ್ 7 ರಂದು ಮದುವೆ ನಡೆಯಬೇಕಿತ್ತು. ಗುರುವಾರ ಮಧ್ಯರಾತ್ರಿ ಕೊಲೆ ನಡೆದಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದು: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ ಪತ್ನಿ- ಶಂಕೆ: ಮೂವರ ಬಂಧನ ಪೊಲೀಸರಿಂದ ತನಿಖೆ

ವ್ಯಕ್ತಿಯ ಬರ್ಬರ ಹತ್ಯೆ: ರಾತ್ರಿ ಮಲಗಿದ್ದಾಗ ತಲೆ‌ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇತ್ತೀಚೆಗೆ ಕಲಬುರಗಿಯ ಭರತ್ ನಗರ ತಾಂಡಾದಲ್ಲಿ ನಡೆದಿತ್ತು. ಲಕ್ಷ್ಮಣ ಚವ್ಹಾಣ (50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಲಕ್ಷ್ಮಣ ಚವ್ಹಾಣ ಕಳೆದ ಕೆಲ ವರ್ಷಗಳಿಂದ ಪ್ಯಾರೆಲೇಸಿಸ್ ಅಟ್ಯಾಕ್ ಆಗಿದ್ದರಿಂದ ನಡೆದಾಡಲು‌ ಆಗ್ತಿರಲಿಲ್ಲ. ಆದರೂ ಕುಳಿತುಕೊಂಡು ಸರಿದಾಡುತ್ತಲೇ ಕೊಂಚ ದೂರದವರೆಗೆ ಹೋಗುತ್ತಿದ್ದರು. ಮೃತ ಲಕ್ಷ್ಮಣ ಸಹೋದರನ ಮಗನ‌ ಮದುವೆ ಸಂಭ್ರಮ ಮನೆಯಲ್ಲಿ ಕಳೆಗಟ್ಟಿತ್ತು.

ಇದನ್ನೂ ಓದಿ: Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಧ್ಯರಾತ್ರಿ 2 ಗಂಟೆವರೆಗೆ ಕುಟುಂಬಸ್ಥರು ಕುಣಿದು ಸಂಭ್ರಮಿಸಿದ್ದಾರೆ. ಲಕ್ಷ್ಮಣ ಕೂಡ ಪಾಲ್ಗೊಂಡು ಸಂಭ್ರಮಿಸಿದ್ದ. ಬಳಿಕ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಲಕ್ಷ್ಮಣ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ರೀತಿಯಲ್ಲಿ ಶವ ಪತ್ತೆಯಾಗಿದೆ. ಕುಟುಂಬಸ್ಥರ ಅಕ್ರಂದನ ಮುಗಿಲು‌ ಮುಟ್ಟಿತ್ತು. ಸ್ಥಳಕ್ಕೆ ಡಿಸಿಪಿ ಆಡೂರು ಶ್ರೀನಿವಾಸಲು ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ‌ ನಡೆಸಿದ್ದರು. ಎಂ.ಬಿ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಮಗನ ಮದುವೆ ಸಂಭ್ರಮದಲ್ಲಿದ್ದ ವ್ಯಕ್ತಿಯ ಬರ್ಬರ ಹತ್ಯೆ..!

ಕತ್ತು ಹಿಸುಕಿ ಪತ್ನಿ ಕೊಲೆ: ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಶಹಾಪುರ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ನಡೆದಿತ್ತು. ತಾಲೂಕಿನ ದೋರನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ನಿಂಗಪ್ಪ ಕ್ವಾಣಿ (38) ಕೊಲೆಯಾದ ಮಹಿಳೆ. ಕೊಲೆ ಆರೋಪಿ ನಿಂಗಪ್ಪ ಮಲ್ಲಪ್ಪ ಕ್ವಾಣಿ(43) ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದ.

ಇದನ್ನೂ ಓದಿ: ಕತ್ತು ಹಿಸುಕಿ ಪತ್ನಿ ಕೊಲೆ ; ಅನೈತಿಕ ಸಂಬಂಧ ಶಂಕೆ

Last Updated : Jun 2, 2023, 11:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.