ಮಂಗಳೂರು: ನಗರದಲ್ಲಿ ಅನಧಿಕೃತ ಕ್ಯಾಬ್ಗಳ ಸೇವೆ ಅಧಿಕವಾಗಿದ್ದು, ಸರ್ಕಾರ ಖಜಾನೆಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಇಲ್ಲಿ ಸರ್ಕಾರಕ್ಕೆ ರಾಜಧನ ಪಾವತಿಸಿ ಟೂರಿಸ್ಟ್ ಕಾರು ಚಾಲಕರು ಈ ಸೇವೆ ನೀಡುತ್ತಿದ್ದಾರೆ. ಆದರೆ, ಅವರ ಹೊಟ್ಟೆಗೆ ಅನಧಿಕೃತ ಕ್ಯಾಬ್ ಚಾಲಕರು ಕಲ್ಲು ಹಾಕುತ್ತಿದ್ದಾರೆ.
ಅನಧಿಕೃತ ಕ್ಯಾಬ್ಗಳ ಸೇವೆಯಿಂದ ಅಧಿಕೃತ ಕ್ಯಾಬ್ ಸೇವೆ ನೀಡುವ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೆಲ ಸಂಸ್ಥೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಅನಧಿಕೃತ ಕ್ಯಾಬ್ ಸೇವೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಸರ್ಕಾರಕ್ಕೆ ಆಗುವ ನಷ್ಟ ತಪ್ಪಿಸಬಹುದು.