ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಲಾಕ್ಡೌನ್ ಮುಂದುವರೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಗುರುವಾರದಿಂದ ಒಂದು ವಾರಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ಈ ಲಾಕ್ಡೌನ್ ನಾಳೆಗೆ ಕೊನೆಗೊಳ್ಳಲಿದ್ದು, ಇದನ್ನು ಮುಂದುವರಿಸುವ ಬಗ್ಗೆ ಇಂದು ಸಂಜೆ ತೀರ್ಮಾನಿಸಲಾಗುವುದು ಎಂದು ಸಚಿವರು ಬೆಳಗ್ಗೆ ತಿಳಿಸಿದ್ದರು.
ಈ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ನಿರ್ದೇಶನದಂತೆ ಬುಧವಾರದವರೆಗೆ ಲಾಕ್ಡೌನ್ ಇರಲಿದೆ. ಗುರುವಾರದಿಂದ ಲಾಕ್ಡೌನ್ ತೆರವುಗೊಳಿಸಲಾಗುತ್ತದೆ. ಗುರುವಾರದಿಂದ ಜಿಲ್ಲೆಯಲ್ಲಿ ಎಲ್ಲಾ ಅಂಗಡಿ-ಮುಂಗಟ್ಟುಗಳು ತೆರೆದಿರುತ್ತದೆ. ವಾಣಿಜ್ಯ ವ್ಯವಹಾರಗಳು ಸರಾಗವಾಗಿರುತ್ತದೆ ಎಂದು ತಿಳಿಸಿದರು.