ETV Bharat / state

ಪಾಸ್ ಪೋರ್ಟ್​ಗಳ ತಪ್ಪಿಗೆ ರೇಷನ್ ಕಾರ್ಡ್​ಗಳಿಗೆ ಶಿಕ್ಷೆ ಎಷ್ಟು ಸರಿ? ಟ್ವೀಟ್​ ಮೂಲಕ ಖಾದರ್ ಪ್ರಶ್ನೆ​!! - ಅನಿವಾಸಿ ಭಾರತೀಯರಿಗೆ ಉಚಿತವಾಗಿ ಭಾರತಕ್ಕೆ ಆಗಮಿಸಲು ವ್ಯವಸ್ಥೆ

ಸರ್ಕಾರ ವಲಸೆ ಕಾರ್ಮಿಕರಿಂದ ಬಿಡಿಗಾಸು ಪಡೆಯದೆ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿ ಅನ್ನೋದೇ ನನ್ನ ಹಕ್ಕೊತ್ತಾಯ ಎಂದು ಶಾಸಕ ಯು.ಟಿ.ಖಾದರ್ ಟ್ವೀಟ್ ಮಾಡಿದ್ದಾರೆ.

khadar makes satire to govt by tweet
ಶಾಸಕ ಯು.ಟಿ.ಖಾದರ್
author img

By

Published : May 3, 2020, 7:16 PM IST

Updated : May 3, 2020, 8:38 PM IST

ಮಂಗಳೂರು: ಸರ್ಕಾರ ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ತಮ್ಮ ಜಿಲ್ಲೆಗಳಿಗೆ ತೆರಳಲು ದುಪ್ಪಟ್ಟು ಬಸ್ ಚಾರ್ಜ್ ವಿಧಿಸಿ, ಹೊರ ದೇಶಗಳಿಂದ ಬರುವ ಅನಿವಾಸಿ ಭಾರತೀಯರಿಗೆ ಉಚಿತವಾಗಿ ಭಾರತಕ್ಕೆ ಆಗಮಿಸಲು ವ್ಯವಸ್ಥೆ ಮಾಡಿದೆ. ಪಾಸ್‌ಪೋರ್ಟ್​ಗಳು ಮಾಡಿದ ತಪ್ಪಿಗೆ ರೇಷನ್ ಕಾರ್ಡ್​ಗಳಿಗೆ ಶಿಕ್ಷೆ ನೀಡೋದು ಎಷ್ಟು ಸರಿ ಎಂದು ಶಾಸಕ ಯು ಟಿ ಖಾದರ್ ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ‌.

  • ವಲಸೆ ಕಾರ್ಮಿಕರ ದುರಂತ ನೋಡಿ ಸ್ವಾಮಿ... ಇಲ್ಲೇ ನಮ್ಮ ರಾಜ್ಯದಲ್ಲೇ ಇದ್ದು ತವರಿಗೆ ತೆರಳುವ ಕಾರ್ಮಿಕರಿಂದ ಸರ್ಕಾರ ಡಬಲ್ ದರದಲ್ಲಿ ಬಸ್ ಚಾರ್ಜ್ ವಸೂಲಿಗೆ ಮುಂದಾಗುತ್ತದೆ. ಅದೇ ಅಮೇರಿಕಾ, ದುಬೈ, ಯೂರೋಪ್ ನಲ್ಲಿರೋ ವಲಸೆ ಭಾರತೀಯರಿಗೆ ಸರ್ಕಾರವೇ ಮುಂದೆ (1) @CMofKarnataka @LaxmanSavadi

    — UT Khadér (@utkhader) May 3, 2020 " class="align-text-top noRightClick twitterSection" data=" ">

ರಾಜ್ಯದ ವಿವಿಧ ಭಾಗಗಳಲ್ಲಿ ಕೂಲಿ ಕೆಲಸಗಳಿಗೆಂದು ಬಂದು ತಮ್ಮ ತಮ್ಮ ಊರಿಗೆ ತೆರಳಬೇಕೆಂದು ಮನವಿ ಮಾಡಿರುವ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ದುಪ್ಪಟ್ಟು ದರದಲ್ಲಿ ಬಸ್ ಚಾರ್ಜ್ ವಸೂಲಿ ಮಾಡಿರುವ ಸರ್ಕಾರ, ಅಮೆರಿಕಾ, ದುಬೈ, ಯುರೋಪ್​​ನಲ್ಲಿರೋ ಭಾರತೀಯರಿಗೆ ವಿಮಾನ, ಹಡಗುಯಾನಗಳ ಪ್ರಯಾಣ ದರ ನೀಡಿ ಕರೆದುಕೊಂಡು ಬಂದಿದೆ. ಇದು ತಪ್ಪು ಎಂದು ನಾನು ಹೇಳೋದಿಲ್ಲ. ಆದರೆ, ಎರಡು ತಿಂಗಳಿನಿಂದ ಕೆಲಸವಿಲ್ಲದೆ, ಕೈಯಲ್ಲಿ ಬಿಡಿಗಾಸೂ ಇಲ್ಲದೆ ಬೀದಿ ಪಾಲಾಗಿರೋ ಅಸಂಖ್ಯ ವಲಸೆ ಕಾರ್ಮಿಕರಿಂದ ಬಸ್ ಚಾರ್ಜ್ ವಸೂಲಿ ಮಾಡಿರೋದು ಅಮಾನವೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ನಿಂತು ಉಚಿತವಾಗಿ ವಿಮಾನ ಹಾಗೂ ಹಡಗಿನ ವ್ಯವಸ್ಥೆ ಮಾಡಿಸುತ್ತೆ.‌ಇದು ತಪ್ಪಲ್ಲ,ತಪ್ಪು ಅಂತಾ ಖಂಡಿತ ನಾನು ಹೇಳೋದಿಲ್ಲ. ಆದರೆ ಎರಡು ತಿಂಗಳಿನಿಂದ ಕೈಯಲ್ಲಿ ಬಿಡಿಗಾಸು ಇಲ್ಲದೇ ಬೀದಿಪಾಲಾಗಿರೋ ಅಸಂಖ್ಯ ವಲಸೆ ಕಾರ್ಮಿಕರಿಂದ ಸರ್ಕಾರ ಬಸ್ ಚಾರ್ಜ್ ವಸೂಲಿ ಮಾಡುತ್ತಿರೋದು ಅಮಾನವೀಯ (2)@CMofKarnataka @LaxmanSavadi

ಆದ್ದರಿಂದ ಸರ್ಕಾರ ವಲಸೆ ಕಾರ್ಮಿಕರಿಂದ ಬಿಡಿಗಾಸು ಪಡೆಯದೆ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿ ಅನ್ನೋದೇ ನನ್ನ ಹಕ್ಕೊತ್ತಾಯ ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

  • ಸರ್ಕಾರ ಕಾರ್ಮಿಕರಿಂದ ಬಿಡಿಗಾಸು ಪಡೆಯದೇ ಅವರನ್ನ ಮನೆ ಮನೆಗೆ ಸುರಕ್ಷಿತವಾಗಿ ತಲುಪಿಸ ಬೇಕು ಅನ್ನೋದು ನನ್ನ ಹಕ್ಕೊತ್ತಾಯ. ಪಾಸ್ ಪೋರ್ಟ್ ಗಳು ಮಾಡಿದ ತಪ್ಪಿಗೆ ರೇಷನ್ ಕಾರ್ಡ್ ಗಳಿಗೆ ಶಿಕ್ಷೆ ಕೊಡೋದು ಎಷ್ಟು ಸರಿ ಅನ್ನೋದೇ ನನ್ನೊಳಗಿನ ಪ್ರಶ್ನೆ (3) @CMofKarnataka@LaxmanSavadi

Last Updated : May 3, 2020, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.