ಕಾರವಾರ: ಜಿಲ್ಲಾಡಳಿತ ಹಾಗೂ ಸೈನಿಕ ಬೋರ್ಡ್ ವತಿಯಿಂದ ವಿಜಯ್ ದಿವಸ್ ಕಾರ್ಯಕ್ರಮವನ್ನು ಕಾರವಾರದಲ್ಲಿ ಆಚರಿಸಲಾಯಿತು. ನಗರದ ವಾರ್‌ಶಿಪ್ ಮ್ಯೂಸಿಯಂ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಕ್ಯಾಪ್ಟನ್ ರಾಘು ರಘೋಬಾ ರಾಣೆ ಅವರ ಪುತ್ಥಳಿಗೆ ಕದಂಬ ನೌಕಾನೆಲೆ ಯೋಜನೆಯ ಕಮಾಂಡರ್ ಸ್ವಾಮಿನಾಥನ್ ಬಾಲಕೃಷ್ಣನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪುಷ್ಪಗಳನ್ನ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ನೌಕಾನೆಲೆ ಯೋಜನೆಯ ಉಪ ನಿರ್ದೇಶಕ ಕಮಾಂಡರ್ ಸ್ವಾಮಿನಾಥನ್, ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತ ಶೌರ್ಯದಿಂದ ಮುನ್ನುಗ್ಗಿದ ಪರಿಣಾಮ ಯುದ್ಧದಲ್ಲಿ ಗೆಲುವು ಸಾಧಿಸಿದೇವು. ಇಂದಿಗೆ ಯುದ್ಧದ ಗೆಲುವಿಗೆ 50 ವರ್ಷಗಳು ತುಂಬಿವೆ. ಅಂದಿನ ಯುದ್ಧದಲ್ಲಿ ಶೌರ್ಯ ಪ್ರದರ್ಶನ ತೋರಿದ ಯೋಧರ ನೆನಪಿಗಾಗಿ ಈ ದಿನವನ್ನೇ ವಿಜಯ್ ದಿವಸ್ ಆಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿರಿ: ಕೊಳ್ಳೇಗಾಲದಲ್ಲಿ ತಡವಾಗಿ ಬೆಳಕಿಗೆ ಬಂದ ಬಾಲ್ಯ ವಿವಾಹ: ಪ್ರಕರಣ ದಾಖಲು
ನಂತರ ಮಾತನಾಡಿದ ಜಿಲ್ಲಾಧಿಕಾರಿ, ದೇಶಕ್ಕಾಗಿ ಯೋಧರು ಹೋರಾಡುವುದಕ್ಕಿಂತ ಅವರನ್ನ ದೇಶದ ಭದ್ರತೆಗೆ ಕಳುಹಿಸಿಕೊಡುವ ಅವರ ಕುಟುಂಬಸ್ಥರ ದೇಶಪ್ರೇಮ ದೊಡ್ಡದು. ಹೀಗಾಗಿಯೇ ಕಾರ್ಯಕ್ರಮದಲ್ಲಿ ಅವರ ಕುಟುಂಬಸ್ಥರನ್ನ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು ಎಂದರು.