ಮಂಗಳೂರು: ನಗರದ ಐಕಳಬಾವಾದಲ್ಲಿ ನಿನ್ನೆ ನಡೆದ ಕಾಂತಬಾರೆ-ಬೂದಬಾರೆ ಕಂಬಳ ಓಟದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ಗಳಲ್ಲಿ 100 ಮೀ. ಕ್ರಮಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಈ ದಾಖಲೆ ಬರೆದಿರುವ ಬೈಂದೂರಿನ ವಿಶ್ವನಾಥ್ ಕಳೆದ ಬಾರಿಯ ಶ್ರೀನಿವಾಸ್ ಗೌಡರ ದಾಖಲೆ ಮುರಿದಿದ್ದಾರೆ. ಕಂಬಳ ಓಟದ "ಉಸೇನ್ ಬೋಲ್ಟ್" ಎಂದು ಪ್ರಖ್ಯಾತರಾಗಿದ್ದ ಶ್ರೀನಿವಾಸ್ ಗೌಡ, ಇದೇ ಐಕಳಬಾವಾದಲ್ಲಿ ಕಳೆದ ಫೆ. 1ರಂದು ನೇಗಿಲ ಹಿರಿಯ ವಿಭಾಗದಲ್ಲಿ 9.55 ಸೆಕೆಂಡ್ಗಳಲ್ಲಿ 100 ಮೀ. ದೂರವನ್ನು ಕ್ರಮಿಸಿದ್ದರು. ಈ ಸಾಧನೆ ದೇಶಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು.
ನಿನ್ನೆ ಐಕಳಬಾವಾದಲ್ಲಿ ಬೈಂದೂರಿನ ವಿಶ್ವನಾಥ್ ಅವರು ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ಓಡಿಸಿದ್ದರು.
ಓದಿ: 13.62 ಸೆಕೆಂಡ್ ನಲ್ಲಿ 142.5 ಮೀ. ಓಟ...ಕರ್ನಾಟಕದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ!