ಬಂಟ್ವಾಳ: ಘಟ್ಟ ಪ್ರದೇಶ ಸೇರಿದಂತೆ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.
ಬಂಟ್ವಾಳದಲ್ಲಿ ಬುಧವಾರ ಬೆಳಗ್ಗೆ ನೇತ್ರಾವತಿ ನದಿ ನೀರಿನ ಮಟ್ಟ 7.5 ಮೀಟರ್ಗೆ ಏರಿಕೆಯಾಗಿದ್ದು, ಇಂದು ರಾತ್ರಿ ಮತ್ತೆ ಮಳೆ ಸುರಿಯುವ ಸಂಭವದಿಂದಾಗಿ ನಾಳೆ ಬೆಳಿಗ್ಗೆ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎನ್ನಲಾಗಿದೆ.
ನೇತ್ರಾವತಿ ನದಿಯ ಅಪಾಯದ ಮಟ್ಟ 8.5ಮೀ. ಆಗಿದ್ದು, ನಿರಂತರವಾಗಿ ಮಳೆಯಾದಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಆ.9ರ ಬಳಿಕ ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಂಟ್ವಾಳ ಪೇಟೆ ಸುತ್ತಮುತ್ತಲಿನ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದವು.
ಇಂದು ಬೆಳಿಗ್ಗೆ 6 ಗಂಟೆಯ ಹೊತ್ತಿಗೆ 7.5 ಮೀ. ಇದ್ದ ನೀರಿನ ಮಟ್ಟ 9 ಗಂಟೆಯ ವೇಳೆಗೆ 7.4 ಮೀ.ಗೆ ಇಳಿಕೆಯಾಗಿತ್ತು. ಸಂಜೆ ಮತ್ತಷ್ಟು ಇಳಿಕೆಯಾಗಿ 7.1 ಮೀ.ಗೆ ತಲುಪಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ರಾತ್ರಿ ಮತ್ತೆ ಮಳೆಯಾದರೆ, ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಲಿದೆ.