ETV Bharat / state

ಪುತ್ತೂರಲ್ಲಿ ಕೆಲಸದ ಆಮಿಷವೊಡ್ಡಿ ವಂಚನೆ ಆರೋಪ: ದೂರು ದಾಖಲು - fraud case in the name of employment

ಕೆಲಸ ಕೊಡಿಸುತ್ತೇವೆ ಎಂದು ಆಮಿಷವೊಡ್ಡಿ 10 ಮಂದಿಯಿಂದ ಹಣ ಪಡೆದು ವಂಚಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ತಮ್ಮ ಗೆಳತಿ ನವ್ಯಾ ಮತ್ತು ಆಕೆಯ ಅಣ್ಣ ಎಂದು ಪರಿಚಯಿಸಿಕೊಂಡ ಯತೀಶ್ ಮರೀಲ್​​ ನಮಗೆ ಮೊಸ ಮಾಡಿದ್ದಾರೆಂದು ಮಂಗಳೂರು ಮೂಲದ ಯುವತಿಯರಿಬ್ಬರು ಪುತ್ತೂರು ನಗರಠಾಣೆಗೆ ದೂರು ನೀಡಿದ್ದಾರೆ.

yathish maril
ಆರೋಪಿ ಯತೀಶ್ ಮರೀಲ್​​
author img

By

Published : Nov 27, 2020, 11:53 AM IST

Updated : Nov 27, 2020, 5:07 PM IST

ಪುತ್ತೂರು: ಕೆಲಸ ಕೊಡಿಸುವ ಆಮಿಷ ತೋರಿಸಿ 10 ಮಂದಿಯಿಂದ 8 ಸಾವಿರ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪ ಪ್ರಕರಣವೊಂದು ಇಲ್ಲಿನ ನಗರ ಠಾಣೆಯಲ್ಲಿ ದಾಖಲಾಗಿದೆ.

ಮಂಗಳೂರು ಮೂಲದ ಯುವತಿಯರಿಬ್ಬರು, ತಮ್ಮ ಗೆಳತಿ ನವ್ಯಾ ಮತ್ತು ಆಕೆಯ ಅಣ್ಣ ಎಂದು ಪರಿಚಯಿಸಿಕೊಂಡ ಯತೀಶ್ ಮರೀಲ್​​ನಿಂದ ಕೆಲಸದ ಆಮಿಷಕ್ಕೊಳಗಾಗಿ ತಮ್ಮಿಂದ ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆಗೊಳಗಾದ ಮಂಗಳೂರಿನ ಯುವತಿ

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುತ್ತೇವೆ. ಆದರೆ ಒಟ್ಟು 10 ಮಂದಿ ಬೇಕು ಎಂದು ನವ್ಯಾ ಮತ್ತು ಯತೀಶ್ ಮರೀಲ್ ಹೇಳಿದ್ದು, ಅವರಿಗೆ ಪ್ರತಿಯೊಬ್ಬರು ತಲಾ 8 ಸಾವಿರ ಹಣ ನೀಡಿದ್ದಾರೆ. ಇದರಲ್ಲಿ ಒಬ್ಬರು ಮಾತ್ರ ನಗದಾಗಿ ಹಣ ನೀಡಿದ್ದು, ಉಳಿದವರು ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿರುತ್ತಾರೆ. ಇದೀಗ ಕೆಲಸ ಬಗ್ಗೆ ವಿಚಾರಿಸಿದಾಗ ಮತ್ತೆ ಹಣ ನೀಡುವಂತೆ ಯತೀಶ್ ಮರೀಲ್ ಒತ್ತಾಯಿಸಿದ್ದಾರೆ. ಹಣ ಕೊಡಲು ನಿರಾಕರಿಸಿದಾದ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಫೋನ್ ಸ್ವಿಚ್ ಆಫ್​​ ಮಾಡಿರುತ್ತಾರೆ. ಗೆಳತಿ ನವ್ಯಾ ಕೂಡಾ ಉಢಾಪೆಯಿಂದ ಮಾತನಾಡಿದ್ದು, ಈ ಹಣ ನೀಡಿದ್ದಕ್ಕೆ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸಿದ್ದಾಳೆಂದು ಆರೋಪಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೊಂದು ದೊಡ್ಡ ಮಟ್ಟದ ವಂಚನಾ ಜಾಲ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ವಿವಿಧ ಕಡೆಗಳಲ್ಲಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನು ಓದಿ: ಬೆಂಗಳೂರು ಪೊಲೀಸರಿಂದ 174 ಬೈಕ್ ಗಳ ರಿಕವರಿ​: ಬುಲೆಟ್, ಕೆ.ಟಿ.ಎಂ, ಡ್ಯೂಕ್ ಗಳೇ ಟಾರ್ಗೆಟ್!!

ಕೆಲಸದ ಆಸೆಯಿಂದ ನಾವು ಈ ಇಬ್ಬರಿಗೆ ಹಣ ನೀಡಿದ್ದು, ಇದೀಗ ವಂಚನೆಗೆ ಒಳಗಾಗಿದ್ದೇವೆ. ಈ ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿರುವ ಗೆಳತಿಯರು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಗೆಳತಿಯನ್ನು ನಂಬಿ ಕೆಟ್ಟರು:

ತನ್ನ ಗೆಳತಿ ಕೆಲಸ ಕೊಡಿಸುತ್ತಾಳೆ ಎಂದು ನಂಬಿಕೊಂಡ ಮಂಗಳೂರು ಮೂಲದ ಯುವತಿ ಇದೀಗ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ತಾನಲ್ಲದೆ ತನ್ನ ಗೆಳತಿ ಹಾಗೂ ಆಕೆಯ ಸಂಬಂಧಿಕರು ಮತ್ತು ಗೆಳತಿಯರನ್ನು ಸೇರಿಸಿಕೊಂಡು ಒಟ್ಟು 10 ಮಂದಿಯಿಂದ ಹಣ ಕೊಡಿಸಿದ ತಪ್ಪಿಗೆ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ. ಕೊರೊನಾ ಹಿನ್ನೆಲೆಯಿಂದ ಬದುಕು ಸಂಕಷ್ಟದಲ್ಲಿದ್ದ ನಮಗೆ ಕೆಲಸ ಅನಿವಾರ್ಯವಾಗಿತ್ತು. ಹಾಗಾಗಿ ಗೆಳತಿ ಎಂಬ ನಂಬಿಕೆಯಿಂದ ನವ್ಯಾಳನ್ನು ನಂಬಿ ಇದೀಗ ಹಣ ಕಳೆದುಕೊಂಡಿದ್ದೇವೆ ಎಂದು ಕಣ್ಣೀರು ಸುರಿಸುತ್ತಾ ಮಂಗಳೂರಿನ ಯುವತಿ ತನ್ನ ನೋವು ತೋಡಿಕೊಂಡಿದ್ದಾರೆ.

Last Updated : Nov 27, 2020, 5:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.