ETV Bharat / state

ಕಾಡಿಂದ ನಾಡಿಗೆ ಬಂದ ಕಾಡಾನೆ ಹಿಂಡು: ಆನೆ ಓಡಿಸಲು ಅಗ್ನಿ ಅಸ್ತ್ರ

ಶಿಬಾಜೆ ಗ್ರಾಮದ ಭಂಡಿಹೊಳೆ ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕೆಲ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ‌ಬೆಂಕಿ ಹಾಕಿ ಆನೆಗಳಿಂದ ಬೆಳೆ ರಕ್ಷಿಸಿಕೊಳ್ಳಲು ‌ಹರಸಾಹಸ ಪಡುತ್ತಿದ್ದಾರೆ.

Fire
ಬೆಂಕಿ
author img

By

Published : Dec 16, 2020, 3:04 PM IST

Updated : Dec 16, 2020, 4:52 PM IST

ಬೆಳ್ತಂಗಡಿ: ಶಿಬಾಜೆ ಗ್ರಾಮದ ಬಟ್ಟಾಜೆಯ‌ ಕಾಡಲ್ಲಿ‌ ಕಾಡಾನೆಗಳ‌ ಹಿಂಡು‌ ಬೀಡು ಬಿಟ್ಟಿದ್ದು, ಆನೆಗಳು ನಿರಾತಂಕ ಓಡಾಟ‌ ನಡೆಸಿವೆ. ಸತತವಾಗಿ‌ ತೋಟಗಳಿಗೆ‌ ಹಾನಿಯುಂಟು‌ ಮಾಡುತ್ತಿವೆ. ಮಂಗಳವಾರ ಸಂಜೆಯೂ ಈ ಪರಿಸರದ ತೋಟಗಳಲ್ಲಿ ಓಡಾಟ ನಡೆಸಿವೆ.

ಮಂಗಳವಾರ ಸಂಜೆ ಭಂಡಿಹೊಳೆಯ ಶರತ್ ತುಳುಪುಳೆಯವರ ತೋಟಕ್ಕೆ ಲಗ್ಗೆ ಇಟ್ಟಿದ್ದು ಕಲ್ಲಿನ ತಡೆಗೋಡೆ, ಬಾಳೆ ಗಿಡಗಳು ಸೇರಿದಂತೆ ಕೃಷಿಗೆ ಹಾನಿಯುಂಟು ಮಾಡಿವೆ. ನೀರಾವರಿ ಪೈಪ್​​ಗಳಿಗೂ ಹಾನಿಯಾಗಿದೆ. ಈ ತೋಟದಲ್ಲಿ ಬಾಳೆಗಿಡಗಳನ್ನು ಹಾಳು ಮಾಡಿದ ನಂತರ ಆನೆಗಳು ಅಲ್ಲಿಂದ ವಿನಾಯಕ ತುಳುಪುಳೆ, ಅರವಿಂದ ತುಳುಪುಳೆಯವರ ತೋಟಕ್ಕೂ ಲಗ್ಗೆ ಇಟ್ಟಿವೆ.

ಆನೆ ಓಡಿಸಲು ಅಗ್ನಿ ಅಸ್ತ್ರ!

fire
ಆನೆ ಓಡಿಸಲು ಅಗ್ನಿ ಅಸ್ತ್ರ

ಸಾರ್ವಜನಿಕರು ಕೆಲ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ‌ಬೆಂಕಿ ಹಾಕಿ ಆನೆಗಳಿಂದ ತಮ್ಮ ಕೃಷಿ ರಕ್ಷಿಸಿಕೊಳ್ಳಲು ‌ಹರಸಾಹಸ ಪಡುತ್ತಿದ್ದಾರೆ. ಶಿಬಾಜೆ ಗ್ರಾಮದ ಭಂಡಿಹೊಳೆ ಪರಿಸರದಲ್ಲಿ ಕಳೆದ ಎರಡು ದಿನದ ಹಿಂದೆ ಬಸ್ತಿ ನಾರಾಯಣ ದಾಮ್ಲೆ, ಉಷಾ ಹಾಗೂ ಮುರಳೀಧರ ದಾಮ್ಲೆ ಅವರ ತೋಟಗಳಿಗೆ ಆನೆಗಳ ಹಿಂಡು ದಾಳಿ ಮಾಡಿ ತೋಟಕ್ಕೆ ಹಾನಿಯನ್ನುಂಟು ಮಾಡಿತ್ತು.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ‌ ಸೇರಿ ಕಾಡಾನೆ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಗಳವಾರ ಸಂಜೆ ಊರವರು ಸೇರಿ 'ಅಗ್ನಿ ಅಸ್ತ್ರ' ಪ್ರಯೋಗಿಸಿದ್ದಾರೆ. ನದಿ ತಟದಲ್ಲಿ ಬೆಂಕಿ ಹಾಕಿ ಆನೆಗಳು ಬರದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಅಂದು ಆನೆಗಳು ಬೆಂಕಿ ಹಾಕಿದ ಸ್ಥಳಕ್ಕೆ ಬರಲಿಲ್ಲ. ಆದರೆ ಈ ಪ್ರದೇಶದಿಂದ ಸ್ವಲ್ಪ ಮುಂದೆ ಹೋಗಿ ಅಲ್ಲಿನ ತೋಟಗಳಿಗೆ ನುಗ್ಗಿ ಬಾಳೆಗಿಡಗಳಿಗೆ ಹಾನಿ ಮಾಡಿವೆ.

ಹಗಲಿನಲ್ಲಿ ಕಾಡು ಸೇರುವ ಆನೆಗಳಿಂದ ರಾತ್ರಿ ತೋಟಕ್ಕೆ ದಾಳಿ!

farm
ತೋಟ ಹಾನಿ

ಹಗಲಿಡೀ ಕಾಡಿನಲ್ಲೇ ಇರುವ ಈ ಆನೆಗಳು ರಾತ್ರಿಯಾಗುತ್ತಿದ್ದಂತೆ ತೋಟಗಳಿಗೆ ದಾಳಿ ಇಡುತ್ತಿವೆ. ಇಲ್ಲಿನ ನಿವಾಸಿಗಳು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಆನೆಗಳಿಂದ ತಮ್ಮ ಕೃಷಿಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ್ದಾರೆ. ಸಂಜೆಯಾದರೆ ಮನೆಗಳಿಂದ ಹೊರ ಬರಲೂ ಆಗದ ಸ್ಥಿತಿಯಿದೆ. ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕಿದೆ.

Elephant
ಆನೆ ಹೆಜ್ಜೆ ಗುರುತು

ಇದನ್ನೂ ಓದಿ...ಗ್ರಾಪಂ ಚುನಾವಣೆ ಮೀಸಲಾತಿ ಪಟ್ಟಿಯಲ್ಲಿ ಸರ್ಕಾರದ ಹಸ್ತಕ್ಷೇಪ : ಮಾಜಿ ಸಚಿವ ರಮಾನಾಥ ರೈ

Last Updated : Dec 16, 2020, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.