ಮಂಗಳೂರು : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿನ ಬಳಿಕ ಅವರ ಅಂಗಾಂಗ ದಾನ ಮಾಡಿ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದರು. ಸಂಚಾರಿ ವಿಜಯ್‌ರಿಂದ ಸ್ಫೂರ್ತಿಗೊಂಡು ತಮ್ಮ ದೇಹದಾನ ಮಾಡಲು ಮಾಜಿ ಸಚಿವ ಅಭಯ್ ಚಂದ್ರ ಜೈನ್ ನಿರ್ಧರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಚಾರಿ ವಿಜಯ್ ಶೃದ್ಧಾಂಜಲಿ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದ್ದಾರೆ.
ಈ ಹಿಂದೆ ಕೂಡ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದೇಹದಾನ ಮಾಡುವ ಬಗ್ಗೆ ಆಲೋಚಿಸಿದ್ದೆ. ಆದರೆ, ಸಂಚಾರಿ ವಿಜಯ್ ಅವರ ಅಂಗಾಂಗದಾನದ ಬಳಿಕ ನನ್ನ ಮರಣಾ ನಂತರವು ಅಂಗಾಂಗ ದಾನವಾಗಬೇಕು ಎಂದು ನಿರ್ಧರಿಸಿದ್ದೇನೆ. ದೇಹದ ಎಲ್ಲಾ ಭಾಗಗಳು ದಾನವಾಗುವ ಬಗ್ಗೆ ನಿರ್ಧರಿಸಿ ದೇಹದಾನ ಮಾಡಲು ಆಲೋಚಿಸಿದ್ದೇನೆ ಎಂದರು.
ತಾನು ಜೈನ ಧರ್ಮಿಯನಾಗಿರುವುದರಿಂದ ಮತ್ತು ಮರಣಾನಂತರ ಮನೆಯವರು ದೇಹದಾನ ಮಾಡಲು ಹಿಂಜರಿಯಬಾರದು ಎಂಬ ನೆಲೆಯಲ್ಲಿ ಅದಕ್ಕಾಗಿ ಕಾನೂನು ಪತ್ರವನ್ನು ಮಾಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಇತರರಿಗೆ ಅನುಕೂಲವಾಗುವಂತೆ ಅಂಗಾಂಗ ದಾನ ಮಾಡಲು ನಿರ್ಧಾರ ತೆಗೆದುಕೊಳ್ಳುವಂತೆ ಕರೆ ನೀಡಿದರು.
ಉದಾ: ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಯಡಿಯೂರಪ್ಪ