ETV Bharat / state

ಸುಳ್ಯದ ಎಲಿಜಬೆತ್‌ ವರ್ಗೀಸ್​ಗೆ ಅಮೆರಿಕ ಯೂನಿವರ್ಸಿಟಿಯಿಂದ 2.5 ಕೋಟಿ ರೂ. ಫೆಲೋಶಿಪ್ - Oklahoma State University Stillwater USA

ಬದಿಯಡ್ಕದ ನಿವಾಸಿ ಪಶು ವೈದ್ಯಕೀಯ ರೋಗಶಾಸ್ತ್ರಜ್ಞರಾಗಿರುವ ಎಲಿಜಬೆತ್‌ ವರ್ಗೀಸ್ ಎಂಬುವವರಿಗೆ ತಮ್ಮ ಸಂಶೋಧನೆಗಾಗಿ ಅಮೆರಿಕಾದ ಸ್ಟೇಟ್ ಯೂನಿವರ್ಸಿಟಿಯಿಂದ ಶಿಷ್ಯವೇತನ ದೊರಕಿದೆ.

ಎಲಿಜಬೆತ್‌ ವರ್ಗೀಸ್
ಎಲಿಜಬೆತ್‌ ವರ್ಗೀಸ್
author img

By

Published : Aug 18, 2023, 11:26 AM IST

Updated : Aug 18, 2023, 12:32 PM IST

ಸುಳ್ಯ(ದಕ್ಷಿಣ ಕನ್ನಡ): ಕೇರಳದ ಗಡಿ ಪ್ರದೇಶವಾದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್​​ಗೆ ಅಮೆರಿಕದಿಂದ 2.5 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ. ಅಮೆರಿಕದ ಸ್ಟಿಲ್ವಾಟರ್ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿಯಿಂದ 5 ವರ್ಷಗಳ ಸಂಶೋಧನೆಗಾಗಿ ಬದಿಯಡ್ಕದ ಚುಳ್ಳಿಕಾನ ನಿವಾಸಿ ಎಲಿಜಬೆತ್ ಅವರಿಗೆ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದಕ್ಕಾಗಿ ಈ 2.5 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ.

ಎಲಿಜಬೆತ್ ಅವರು ಚೆನ್ನೈನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರಜ್ಞರಾಗಿದ್ದಾರೆ. ಎಲಿಜಬೆತ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಗೋರಕ್‌ಪುರದಲ್ಲಿ ಪಡೆದಿದ್ದಾರೆ. ಇವರು ಭಾಷಣ ಕಲೆಯಲ್ಲಿ ಮತ್ತು ಬರವಣಿಗೆಯಲ್ಲಿ ನೈಪುಣ್ಯತೆ ಪಡೆದಿದ್ದು, ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಹಿರಿಮೆ ಹೊಂದಿದ್ದಾರೆ. ಎಲಿಜಬೆತ್​ ಅವರು ಮದ್ರಾಸ್ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಮತ್ತು ಪೂಕೋಡ್‌ನ ವೆಟರ್ನರಿ ಕಾಲೇಜಿನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ಎಲಿಜಬೆತ್, ಶಿಕ್ಷಕರಾದ ವರ್ಗೀಸ್ ವೀರಾಲಾಶೇರಿಯಿಲ್ ಮತ್ತು ತೆರೇಸಾ ತುನಿಯಾಂಬ್ರೈಲ್ ಅವರ ಪುತ್ರಿಯಾಗಿದ್ದಾರೆ. ಎಲಿಜಬೆತ್ ಅವರ ತಂದೆ ಪತ್ರಿಕೋದ್ಯಮ ಸೇರಿದಂತೆ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಲಿಜಬೆತ್ ಅವರ ಅಕ್ಕ ರೆಜಿನಾ ಮೇರಿ ವರ್ಗೀಸ್ ಅವರು ಇಂಡಿಯನ್ ಸಿವಿಲ್ ಸರ್ವಿಸ್‌ನಲ್ಲಿ 49ನೇ ರಾಂಕ್ ಪಡೆದು ಐಎಫ್‌ಎಸ್ ವಿದ್ಯಾರ್ಥಿನಿಯಾಗಿದ್ದಾರೆ. ಇವರ ಅಣ್ಣ ರೋಹಿತ್ ಆ್ಯಂಟನಿ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಜಿಆರ್‌ಇ ಪರೀಕ್ಷೆ ಬರೆದು ಎಲಿಜಬೆತ್‌ ಅವರು ಅಮೆರಿಕದ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿಗೆ ಆಯ್ಕೆಯಾಗಿದ್ದು, ಆಗಸ್ಟ್ 11ರಂದು ಅಮೆರಿಕಕ್ಕೆ ತೆರಳಿದ್ದಾರೆ.

ದಲಿತ ವಿದ್ಯಾರ್ಥಿ ಪ್ರೇಮ್​ಗೆ ಒಲಿದಿತ್ತು ಶಿಷ್ಯವೇತನ: ಕಳೆದ ವರ್ಷ ಬಿಹಾರದ ಫುಲ್ವಾರಿಶರೀಫ್​ನಲ್ಲಿ ನೆಲೆಸಿರುವ ದಲಿತ ಕುಟುಂಬದ ಬಾಲಕನಿಗೆ ತನ್ನ ಭವಿಷ್ಯವನ್ನು ಅಮೆರಿಕದಲ್ಲಿ ರೂಪಿಸಿಕೊಳ್ಳವ ಭಾಗ್ಯ ಒಲಿದು ಬಂದಿತ್ತು. ಪಾಟ್ನಾದ ಗೊನ್‌ಪುರ ಗ್ರಾಮದ 17 ವರ್ಷದ ಪ್ರೇಮ್ ಕುಮಾರ್ ಅಮೆರಿಕದ ಪ್ರತಿಷ್ಠಿತ ಲಫಯೆಟ್ಟೆ ಕಾಲೇಜ್‌ನಲ್ಲಿ ಅಧ್ಯಯನಕ್ಕಾಗಿ 2.5 ಕೋಟಿ ರೂ. ಫೆಲೋಶಿಪ್​​ ಪಡೆದಿದ್ದರು.

ಈತ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ದಲಿತ ವಿದ್ಯಾರ್ಥಿಯಾಗಿದ್ದಾನೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಕುಟುಂಬ ಈತನಿದಾಗಿದ್ದು, ತನ್ನ ಕಷ್ಟಗಳ ನಡುವೆ ಲಫಯೆಟ್ಟೆ ಕಾಲೇಜಿನಿಂದ ಪ್ರತಿಷ್ಠಿತ 'ಡಯರ್ ಫೆಲೋಶಿಪ್' ಪಡೆಯುವ ವಿಶ್ವದ 6 ವಿದ್ಯಾರ್ಥಿಗಳಲ್ಲಿ ಈತನು ಒಬ್ಬನಾಗಿದ್ದ.

ಪಾಟ್ನಾದ ಸಂಸ್ಥೆಯೊಂದಕ್ಕೆ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಇವರು ಅಮೆರಿಕದ ಪ್ರತಿಷ್ಠಿತ ಕಾಲೇಜ್ ಲಫಾಯೆಟ್ಟೆಗೆ ಆಯ್ಕೆಯಾಗಿದ್ದು, ಪದವಿ ವ್ಯಾಸಂಗ ಮಾಡಲು ಕಾಲೇಜಿನಿಂದ 2.5 ಕೋಟಿ ರೂಪಾಯಿ ಶಿಷ್ಯವೇತನ ಪಡೆದಿದ್ದ. ಈ ವೇತನ ಅಧ್ಯಯನದ ಸಂಪೂರ್ಣ ವೆಚ್ಚ ಮತ್ತು ಜೀವನ ವೆಚ್ಚವನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಬೋಧನಾ ಶುಲ್ಕ, ನಿವಾಸ, ಪುಸ್ತಕಗಳು, ಆರೋಗ್ಯ ವಿಮೆ, ಪ್ರಯಾಣ ವೆಚ್ಚಗಳು ಇತ್ಯಾದಿ ಇರುತ್ತವೆ.

ಇದನ್ನೂ ಓದಿ: ಇಗ್ನೋದಲ್ಲಿ ವಿವಿಧ ಪದವಿ, ಡಿಪ್ಲೋಮಾ ಕೋರ್ಸ್​ಗಳಿಗೆ ಪ್ರವೇಶಾತಿ ಆರಂಭ: ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ರಾಧಾ ಮಾಹಿತಿ

Last Updated : Aug 18, 2023, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.