ETV Bharat / state

ಇರುವೈಲು ದೇವಸ್ಥಾನದ ದೈವ ಪಾತ್ರಿ ವಿವಾದ: ಭಕ್ತರ ಗುಂಪಿನಿಂದ ಪೊಲೀಸ್ ಠಾಣೆಗೆ ಮುತ್ತಿಗೆ - ಮಂಗಳೂರು

ಮೂಡುಬಿದಿರೆ ಸಮೀಪದ ಇರುವೈಲು ಶ್ರೀದುರ್ಗಾ ಪರಮೇಶ್ವರಿ ದೇವಳದ ದೈವ ಪಾತ್ರಿಗೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ನಡೆದ ಮಾರಾಮಾರಿ ನಡೆದಿದೆ.

Divine Potter controversy in Eruvilau Temple
ಇರುವೈಲು ದೇವಸ್ಥಾನದ ದೈವ ಪಾತ್ರಿ ವಿವಾದ
author img

By

Published : Mar 15, 2020, 7:40 PM IST

ಮಂಗಳೂರು: ಮೂಡುಬಿದಿರೆ ಸಮೀಪದ ಇರುವೈಲು ಶ್ರೀದುರ್ಗಾ ಪರಮೇಶ್ವರಿ ದೇವಳದ ದೈವ ಪಾತ್ರಿಗೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ನಡೆದ ಮಾರಾಮಾರಿ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಇರುವೈಲು ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಗೊಂದಲಗಳಿಂದ ಅಸಮಾಧಾನಗೊಂಡ ದೇವಳದ ಭಕ್ತರ ಗುಂಪೊಂದು ಭಾನುವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ದೇವಸ್ಥಾನದ ಆರಾಧನೆಗಳು ಇನ್ನು ಮುಂದೆ ಸುಸೂತ್ರವಾಗಿ ನಡೆಯುವಂತೆ ಕಾನೂನು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಲಾಗಿದೆ.

ಇರುವೈಲು ದೇವಸ್ಥಾನದ ದೈವ ಪಾತ್ರಿ ವಿವಾದ

ಶನಿವಾರ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊಸಮರಾಯ ದೈವದ ನೇಮ ನಡೆಯುತ್ತಿರುವಾಗಲೇ ತಂಡವೊಂದು ಅಲ್ಲಿದ್ದ ಕೆಲವರಿಗೆ ಹಲ್ಲೆ ನಡೆಸಲಾಗಿತ್ತು. ಬಳಿಕ ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಅದೇ ತಂಡ ವಾಹನ ಅಡ್ಡಗಟ್ಟಿ ಮತ್ತೊಮ್ಮೆ ಹಲ್ಲೆ ನಡೆಸಿದೆ ಎಂಬ ದೂರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಣಂಬೂರು ಉಪವಿಭಾಗದ ಎಸಿಪಿ ಕೆ.ಯು ಬೆಳ್ಳಿಯಪ್ಪ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಜೊತೆ ಸಮಾಲೋಚನೆ ನಡೆಸಿದರು.

ಇರುವೈಲು ದೇವಸ್ಥಾನದ ದೈವದ ಪಾತ್ರಿ ವಿಚಾರದಲ್ಲಿ ತಂಡವೊಂದು ಹಲವು ಸಮಯಗಳಿಂದ ವಿರೋಧಿಸುತ್ತಾ ಬಂದಿದೆ. ಶನಿವಾರ ಹೊಸಮರಾಯ ದೈವದ ಕೋಲ ಆರಂಭವಾಗುವ ಹೊತ್ತಿಗೆ ತಂಡವೊಂದು ದೈವದ ಪಾತ್ರಿಯನ್ನು ನಿಂದಿಸಿದ್ದರಿಂದ ಈ ವಿವಾದ ಉಂಟಾಗಿತ್ತು. ಇದನ್ನು ಆಕ್ಷೇಪಿಸಿದವರಿಗೆ ತಂಡ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದವರನ್ನು ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಅದೇ ತಂಡ ಮಾಸ್ತಿಕಟ್ಟೆಯಲ್ಲಿ ವಾಹನವನ್ನು ತಡೆದು ಮತ್ತೊಮ್ಮೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಾಜಕೀಯ ಒತ್ತಡ, ಪೊಲೀಸರ ಹಸ್ತಕ್ಷೇಪದಿಂದ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ತೊಂದರೆ ಆಗಿದೆ ಎಂದು ಈ ಸಂದರ್ಭ ಧರಣಿ ನಿರತರು ಆರೋಪಿಸಿದರು.

ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೈವದ ಪಾತ್ರಿ ವಿವಾದ ಧಾರ್ಮಿಕ ವಿಷಯವಾಗಿರುವುದರಿಂದ ಊರವರ ಜತೆ ಮಾತುಕತೆ ನಡೆಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಎಸಿಪಿ ಧರಣಿ ನಿರತರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು. ದೇವಸ್ಥಾನದಲ್ಲಿ ನಡೆದ ವಿವಾದ ಹಾಗೂ ಮಾಸ್ತಿಕಟ್ಟೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್‍ ಠಾಣೆಯಲ್ಲಿ ಎರಡೂ ಕಡೆಯ ತಲಾ 8 ಮಂದಿ ವಿರುದ್ಧ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.