ಮಂಗಳೂರು: ಕೋವಿಡ್ ಲಸಿಕೆ ಇಂದು ಸಂಜೆಯೊಳಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಎಲ್ಲ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಮಂಗಳೂರಿಗೆ ಬರುವ ಕೊರೊನಾ ಲಸಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ವ್ಯಾಕ್ಸಿನ್ ಸ್ಟೋರ್ನಲ್ಲಿ ಸಂಗ್ರಹಿಸಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ಕೂಡ ನಡೆಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಪ್ರಥಮ ಹಂತದಲ್ಲಿ ಆರೋಗ್ಯ ಕ್ಷೇತ್ರದ ಕೊರೊನಾ ವಾರಿಯರ್ಸ್ಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ 50,104 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಬೆಳಗಾವಿ ಕೊಗನೊಳ್ಳಿ ಟೋಲ್ ಗೇಟ್ ಪ್ರವೇಶ ಮಾಡಿದ ಕೋವಿಶೀಲ್ಡ್
ಜನವರಿ 16ರಂದು ಜಿಲ್ಲೆಯ ಆರು ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸುರತ್ಕಲ್ ನಗರ ಆರೋಗ್ಯ ಕೇಂದ್ರ , ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಆಸ್ಪತ್ರೆಗಳಿಗೆ ಶನಿವಾರ ಲಸಿಕೆಗಳು ಪೂರೈಕೆಯಾಗಲಿದೆ.