ಪುತ್ತೂರು: ಇಲ್ಲಿನ ಎರಡು ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರ ಎರಡನೇ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಇಲ್ಲಿನ ಎರಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಜತ್ತೂರಿನ 80 ವರ್ಷದ ವೃದ್ಧೆ ಮತ್ತು ಬಪ್ಪಳಿಗೆಯ 20 ವರ್ಷದ ಯುವಕನಿಗೆ ಜೂ. 27ರಂದು ಕೊರೊನಾ ದೃಢಪಟ್ಟ ಕುರಿತು ವರದಿಯಾಗಿತ್ತು. ಅದೇ ದಿನ ಅವರಿಬ್ಬರನ್ನು ಮಂಗಳೂರು ವೆನ್‌ಲಾಕ್ ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.
ಇದೀಗ ಅವರಿಬ್ಬರ ಗುಣಮುಖ ಹೊಂದಿದ್ದು, ಎಡರನೇ ಬಾರಿ ಅವರ ಗಂಟಲ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆ ಒಳಪಡಿಸಿದಾಗ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಎರಡು ಆಸ್ಪತ್ರೆಗಳಲ್ಲಿ ಕೊರೊನಾ ದೃಢಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದ ಸಿಬ್ಬಂದಿ ಮತ್ತು ವೈದ್ಯರಿಬ್ಬರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದೀಗ ರೋಗಿಗಳಿಬ್ಬರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದ್ದರಿಂದ ಆತಂಕ ದೂರವಾಗಿದೆ.