ಪುತ್ತೂರು: ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆತಂಕ ಸೃಷ್ಟಿ ಮಾಡುತ್ತಿದೆ. ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಸಂಪ್ಯ ಉದಯಗಿರಿ ನಿವಾಸಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಸಂಪ್ಯದ ಉದಯಗಿರಿ ನಿವಾಸಿಯೊಬ್ಬರು ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು. ಲಾಕ್‌ಡೌನ್ ಬಳಿಕ ಉದಯಗಿರಿ ಮನೆಯಲ್ಲೇ ಇದ್ದು, ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದ ಬಳಿಕ ಶೀತ, ಜ್ವರ ಕಂಡುಬಂದಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು.
ಆಸ್ಪತ್ರೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ವರದಿಯಲ್ಲಿ ಕೊರೊನಾ ದೃಢಪಟ್ಟಿರುವುದು ತಿಳಿದು ಬಂದಿದೆ.
ಇನ್ನು ಸೋಂಕಿತ ವ್ಯಕ್ತಿಯ ಮನೆಯವರಾದ ಅವರ ಅಜ್ಜ, ತಾಯಿ ಮತ್ತು ಸಹೋದರನನ್ನು ಮನೆಯಲ್ಲೇ ಕಾರಂಟೈನ್ ಮಾಡಲಾಗಿದೆ.