ETV Bharat / state

ಭಗವತಿ ಪ್ರೇಮ್ ಡ್ರಜ್ಜರ್ ಸುರಕ್ಷಿತವಾಗಿ ಲೈಟ್​ ಹೌಸ್​ ಬಳಿ ಸ್ಥಳಾಂತರ - ಮುಳುಗಿದ ಡ್ರಜ್ಜರ್ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ಮುಂದಾಗದ ಕಂಪೆನಿ

ಭಗವತಿ ಡ್ರಜ್ಜರ್ ಮಾಲೀಕ ಎನ್ಎಂಪಿಟಿಗೆ ಕೊಡಬೇಕಾದ ಹಣವನ್ನು ಪಾವತಿ ಮಾಡಿಲ್ಲ‌. ಆದ್ದರಿಂದ ಎನ್ಎಂಪಿಟಿಯೇ ಕೇಂದ್ರ ಸರ್ಕಾರದ ಎಂಎಸ್​ಡಿಸಿ ಫಂಡ್ ಮೂಲಕ ಡ್ರಜ್ಜರ್ ಅನ್ನು ಸುರಕ್ಷಿತವಾಗಿ ಲೈಟ್ ಹೌಸ್ ಬಳಿ ನಿಲ್ಲಿಸಿದೆ.

Mangalore
Mangalore
author img

By

Published : Jul 4, 2020, 2:32 AM IST

ಮಂಗಳೂರು: 2019ರ ಏಪ್ರಿಲ್​ನಲ್ಲಿ ಭಗವತಿ ಪ್ರೇಮ್ ಎಂಬ ಡ್ರಜ್ಜರ್ ನಗರದ ಎನ್ಎಂಪಿಟಿ ಬಳಿ ಮುಳುಗಿದ್ದು, ಅದನ್ನು ಅಲ್ಲಿಂದ ಸ್ಥಳಾಂತರಿಸಲು ಡ್ರಜ್ಜರ್ ಕಂಪೆನಿ ಯಾವುದೇ ಕ್ರಮಕೊಳ್ಳದ ಹಿನ್ನೆಲೆಯಲ್ಲಿ ಎನ್ಎಂಪಿಟಿಯ ಲೈಟ್ ಹೌಸ್ ಬಳಿ ನಿಲ್ಲಿಸಲಾಗಿದೆ.

ಭಗವತಿ ಪ್ರೇಮ್ ಡ್ರಜ್ಜರ್ ಎನ್ಎಂಪಿಟಿ ಬಳಿ ಮುಳುಗಿದ್ದು, ಅದನ್ನು ಸ್ಥಳಾಂತರಿಸುವಂತೆ ಹಾಗೂ ಸುಸ್ಥತಿಯಲ್ಲಿ ಇಡುವಂತೆ ಅದರ ಮಾಲೀಕ ಮರ್ಕೇಟರ್ ಅವರಿಗೆ ತಿಳಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ ಡ್ರಜ್ಜರ್​ನಲ್ಲಿ ಸೋರಿಕೆ ಕಂಡು ಬಂದಿದೆ ಎಂದು ಕ್ಯಾಪ್ಟನ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎನ್ಎಂಪಿಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅದು ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಕಂಡುಕೊಳ್ಳಲಾಗಿದೆ. ಭಗವತಿ ಡ್ರಜ್ಜರ್ ಮಾಲೀಕ ಎನ್ಎಂಪಿಟಿಗೆ ಕೊಡಬೇಕಾದ ಹಣವನ್ನು ಪಾವತಿ ಮಾಡಿಲ್ಲ‌. ಆದ್ದರಿಂದ ಎನ್ಎಂಪಿಟಿಯೇ ಕೇಂದ್ರ ಸರ್ಕಾರದ ಎಂಎಸ್​ಡಿಸಿ ಫಂಡ್ ಮೂಲಕ ಡ್ರಜ್ಜರ್ ಅನ್ನು ಸುರಕ್ಷಿತವಾಗಿ ಲೈಟ್ ಹೌಸ್ ಬಳಿ ನಿಲ್ಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.