ETV Bharat / state

ಆಟವಾಡುತ್ತಿದ್ದ ಮಗು ನೀರಿನ ಬಕೆಟ್​ಗೆ ಬಿದ್ದು ದಾರುಣ ಸಾವು - ಮಂಗಳೂರು ಅಪರಾಧ ಸುದ್ದಿ

ನೀರು ತುಂಬಿದ ಬಕೆಟ್​ಗೆ ಮಗು ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ನೀರಿನ ಬಕೆಟ್​ಗೆ ಬಿದ್ದು ದಾರುಣ ಸಾವು
ನೀರಿನ ಬಕೆಟ್​ಗೆ ಬಿದ್ದು ದಾರುಣ ಸಾವು
author img

By

Published : Oct 19, 2020, 4:56 PM IST

ಬೆಳ್ತಂಗಡಿ: ಆಟವಾಡುತ್ತಿದ್ದ ಮಗು ಆಕಸ್ಮಾತ್ತಾಗಿ ಕಾಲು ಜಾರಿ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ದಾರುಣವಾಗಿ ಮೃತ ಪಟ್ಟ ಘಟನೆ ಅರಸಿನಮಕ್ಕಿ ಸಮೀಪದ ಕಲ್ಲಕೋಟೆ ಎಂಬಲ್ಲಿ ನಡೆದಿದೆ.

ಜಗದೀಶ್ ಆಚಾಯ೯ ಮತ್ತು ವಿದ್ಯಾ ದಂಪತಿಗಳ 8 ತಿಂಗಳ ಮಗು ಸಾವನ್ನಪ್ಪಿದೆ. ಇನ್ನು ತಾಯಿ ಬಟ್ಟೆ ಒಗೆಯುತ್ತಿದ್ದ ಸಂದಭ೯ದಲ್ಲಿ ಶೌಚಾಲಯದೊಳಗೆ ಆಟವಾಡುತ್ತಿದ್ದ ಮಗು ನೀರಿನ ಬಕೆಟ್​ಗೆ ಲೋಟ ಬಿದ್ದಿದ್ದನ್ನು ತೆಗೆಯಲು ಯತ್ನಿಸಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ.

ಜಗದೀಶ್ ಆಚಾರ್ಯ ಅರಸಿನಮಕ್ಕಿ-ಕೊಕ್ಕಡ ನಡುವೆ ಜೀಪು ಸರ್ವಿಸ್ ಮಾಡುತ್ತಿದ್ದು, ಘಟನೆ ನಡೆದಾಗ ಅವರು ಶಿವಮೊಗ್ಗ ಬಳಿಯ ಜೋಗಕ್ಕೆ ಬಾಡಿಗೆಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.