ETV Bharat / state

ಕರಾವಳಿ ಸೊಬಗು ಬಂಧಿಸಿಡುವ ಭಾವನಾತ್ಮಕ ಫೋಟೋಶೂಟ್​.. ‘ಎನ್ನ ಕುಡ್ಲ’ ಎಲ್ಲೆಲ್ಲೂ ವೈರಲ್​​..! - ಎನ್ನಕುಡ್ಲ ಫೋಟೋಶೂಟ್

ವಿವಾಹವಾಗಿ ಬೇರೊಂದು ಊರು ಸೇರುವ ಮಂಗಳೂರು ಯುವತಿಯ ಮನದ ಅಂತರಾಳ ಕುರಿತು ಡ್ರೀಮ್ಸ್ ಕ್ಯಾಚರ್ಸ್​ ಸಂಸ್ಥೆ ರಚಿಸಿರುವ ವಿಡಿಯೋವೊಂದು ಕುಡ್ಲ ಜನರ ಮನಗೆದ್ದಿದೆ. ಕರಾವಳಿಯ ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ವಿಡಿಯೋ ರಚಿಸಲಾಗಿದ್ದು, ಪೃಥ್ವಿ ಗಣೇಶ್ ಕಾಮತ್ ಫೋಟೋಶೂಟ್​​​ ಇದೀಗ ವೈರಲ್ ಆಗುತ್ತಿದೆ.

Prithvi Ganesh Kamath, Founder of Dreams Catchers Events
ಡ್ರೀಮ್ಸ್ ಕ್ಯಾಚರ್ಸ್ ಈವೆಂಟ್ಸ್​​​ನ ಸಂಸ್ಥಾಪಕಿ ಪೃಥ್ವಿ ಗಣೇಶ್ ಕಾಮತ್
author img

By

Published : Nov 4, 2020, 3:51 PM IST

ಮಂಗಳೂರು: ವಿವಾಹವಾಗಿ ಊರು ಬಿಟ್ಟು ಮತ್ತೊಂದು ಊರಿಗೆ ತೆರಳುವ ಹೆಣ್ಣಿಗೆ ಆಕೆಯ ಊರು ಭಾವನಾತ್ಮಕವಾಗಿ ಕಾಡಿಯೇ ಕಾಡುತ್ತದೆ. ಹುಟ್ಟಿದ ಊರು, ಬೆಳೆದ ಪರಿಸರ ಎಲ್ಲವನ್ನೂ ತೊರೆದು ಹೋಗಲು ಸ್ವಲ್ಪ ಕಷ್ಟವೇ. ಇದೇ ವಿಷಯವನ್ನಿರಿಸಿ ಕುಡ್ಲದ ಮಹಿಳೆಯೋರ್ವರು ಮಾಡಿರುವ ಭಾವನಾತ್ಮಕ ಫೋಟೋಶೂಟ್ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಡ್ರೀಮ್ಸ್ ಕ್ಯಾಚರ್ಸ್ ಈವೆಂಟ್ಸ್​​​ನ ಸಂಸ್ಥಾಪಕಿ ಪೃಥ್ವಿ ಗಣೇಶ್ ಕಾಮತ್

ವಿಭಿನ್ನ ಕಲ್ಪನೆಯಲ್ಲಿ 'ಎನ್ನ ಕುಡ್ಲ' ಎಂಬ ಈ ಫೋಟೋಶೂಟ್ ವಿಡಿಯೋವನ್ನು ‌ಮಾಡಲಾಗಿದೆ. ವಿವಾಹವಾಗುವ ಯುವತಿಯ ದೃಷ್ಟಿಯಲ್ಲಿ ತಾನು ಹುಟ್ಟಿಬೆಳೆದ ಊರು ಮಂಗಳೂರು ಹೇಗಿದೆ ಎಂಬುದನ್ನು ಸುಂದರ ಫೋಟೋಶೂಟ್ ಮೂಲಕ ವರ್ಣಿಸಲಾಗಿದೆ. ಬಳಿಕ ಆ ಫೋಟೋಗಳನ್ನೇ ವೀಡಿಯೋ ಮಾಡಿ ಕುಡ್ಲದ ಸೊಬಗನ್ನು ಹೆಣ್ಣಿನ ಅಂತರಂಗದ ಭಾಷೆಯ ಮೂಲಕ ನಿರೂಪಿಸಲಾಗಿದೆ. ಇಲ್ಲಿ ಮಂಗಳೂರಿನ ಆಹಾರ, ಸಂಸ್ಕೃತಿ, ಸಮುದ್ರ,‌ ನದಿ ಕರಾವಳಿಯ ಸೊಬಗಿನ ವಿಶೇಷತೆಗಳೆಲ್ಲಾ ಇದರಲ್ಲಿ ಅಡಗಿದೆ.

‘ಈ ವಿಭಿನ್ನ ಕಲ್ಪನೆಯನ್ನು ಮಂಗಳೂರು ಡ್ರೀಮ್ಸ್ ಕ್ಯಾಚರ್ಸ್ ಈವೆಂಟ್ಸ್​​​ನ ಸಂಸ್ಥಾಪಕಿ ಪೃಥ್ವಿ ಗಣೇಶ್ ಕಾಮತ್ ನಿರ್ಮಿಸಿದ್ದು, ಅವರು 'ಕುಡ್ಲ' (ಮಂಗಳೂರು) ವನ್ನು ಕೇವಲ ಫೋಟೋಶೂಟ್ ಮೂಲಕ ಮಂಗಳೂರಿನ ವಿಭಿನ್ನತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಎನ್ನಕುಡ್ಲ ವಿಡಿಯೋ

ಇಲ್ಲಿ ತನ್ನ ಊರು ಮಂಗಳೂರು ಹೇಗಿದೆ? ಯಾವ ರೀತಿ ತನಗೆ‌ ಖುಷಿ‌ ಕೊಟ್ಟಿದೆ, ಇಲ್ಲಿನ ವಿಶೇಷತೆಗಳೇನು ಎಂಬುದನ್ನು ವಿಶಿಷ್ಟ ಫೋಟೋಶೂಟ್ ಮೂಲಕ ಚಿತ್ರಿಸಲಾಗಿದೆ. ನವವಧುವಿನಂತೆ ಪೃಥ್ವಿ ಗಣೇಶ್ ಕಾಮತ್ ಭರ್ಜರಿ ಲೆಹಂಗಾ, ದುಪ್ಪಟ್ಟಾ ತೊಟ್ಟು, ಭಾರೀ ಒಡವೆ ಧರಿಸಿ 4.24 ನಿಮಿಷಗಳ ವಿಭಿನ್ನ ಪರಿಕಲ್ಪನೆಯಲ್ಲಿ ಕಟ್ಟಿಕೊಟ್ಟ ಈ ಭಾವನಾತ್ಮಕ ವೀಡಿಯೋ ಎಲ್ಲರನ್ನೂ ಕಾಡಿಯೇ ಕಾಡುತ್ತದೆ.

ಈ ಫೋಟೋಶೂಟ್ ವಿಡಿಯೋಗೆ ಸ್ಕ್ರಿಪ್ಟ್ ಬರೆದು ಹಾಗೂ ಸ್ವರ ನೀಡಿರೋದು ಯುಎಇನಲ್ಲಿರುವ ಆಂಡ್ರಿಯಾ ಮಿರಾಂಡ, ಸಂತೋಷ್ ಗೋಲ್ಡ್ ಅದ್ಭುತವಾಗಿ ಫೋಟೋಗ್ರಫಿ ಮಾಡಿದ್ದಾರೆ. ಚೇತನಾ ಬ್ಯೂಟಿ ಲೌಂಜ್ ಅಕಾಡೆಮಿಯ ಚೇತನಾ ಎಸ್.ಮೇಕಪ್ ಮಾಡಿ ಪೃಥ್ವಿಯವರನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ಫೋಟೋಗಳನ್ನು ಹೊಸೆದು ವಿಡಿಯೋ ಮಾಡಿರೋದು ರಾಹುಲ್ ಪಂಡಿತ್ ಹಾಗೆಯೇ ವಸ್ತ್ರಂ ಮಂಗಳೂರು ತನ್ವೀರಾ ಹಾಗೂ ಕಾಸ್ಟ್ಯೂಮ್ ಕಾಟೇಜ್​​ನ ಸುಜಾತಾ ಕೋಟ್ಯಾನ್ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ಪೃಥ್ವಿ ಗಣೇಶ್ ಕಾಮತ್ ಅವರು ಮಾತನಾಡಿ, ಲಾಕ್​ಡೌನ್ ಸಂದರ್ಭದಲ್ಲಿ ವಿದೇಶದಲ್ಲಿರುವ ಮಂಗಳೂರಿನ ಎಷ್ಟೋ ಮಂದಿಗೆ ತಾಯ್ನಾಡಿಗೆ ಬರಲು ಸಾಧ್ಯವಾಗಿಲ್ಲ. ಅದು ನನ್ನನ್ನು ಕಾಡುತ್ತಿತ್ತು. ಆದ್ದರಿಂದ ಈ ಫೋಟೋಶೂಟ್ ಮೂಲಕ ನಾನು ಮಂಗಳೂರನ್ನು 4.24 ನಿಮಿಷದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ವಿಡಿಯೋ ಫೋಟೋಶೂಟ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವರಿರುವ ಸ್ಥಳಕ್ಕೇ ನಮ್ಮ ಮಂಗಳೂರನ್ನು ತಲುಪಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.