ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು, ದುರಂತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ನೆಲ್ಯಾಡಿಯ ಉದ್ಯಮಿ ಯು.ಪಿ. ವರ್ಗೀಸ್ ಅವರ ಸೊಸೆ, ಕಾಂಚನ ನಿವಾಸಿ ಶಾಜಿ ಎಂಬುವರ ಪತ್ನಿ ಜೈನಿ ಶಾಜಿ (30) ಮತ್ತು ಜಿತಿನ್ ಜೇಕಬ್ (28) ಮೃತಪಟ್ಟವರು.
ಈ ಅವಘಡದಲ್ಲಿ ಸರ್ವೀನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಉಪ್ಪಿನಂಗಡಿ ಕಡೆ ಸಂಚರಿಸುವಾಗ ವಿರುದ್ಧ ದಿಕ್ಕಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.