ಮಂಗಳೂರು: ದ.ಕ.ಜಿಲ್ಲೆಯಲ್ಲಿಂಂದು 326 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.
ಇಂದು ಕಂಡು ಬಂದಿರು ಪ್ರಕರಣಗಳು:
ಮಂಗಳೂರಿನಲ್ಲಿ 187 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ 39, ಬೆಳ್ತಂಗಡಿಯಲ್ಲಿ 33, ಪುತ್ತೂರಿನಲ್ಲಿ 28, ಸುಳ್ಯದಲ್ಲಿ 27 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಹೊರ ಜಿಲ್ಲೆಯಿಂದ ಬಂದಿರುವ 12 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಈ ಮೂಲಕ ಸೋಂಕಿರತ ಸಂಖ್ಯೆ 14,926 ಕ್ಕೆ ಏರಿಕೆಯಾಗಿದೆ.
ಗುಣಮುಖರಾದವ ವಿವರ:
ಇಂದು ಕೊರೊನಾದಿಂದ 202 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಈ ಮೂಲಕ 11,441 ಮಂದಿ ಗುಣಮುಖರಾಗಿದ್ದಾರೆ.
ಮೃತರಿಷ್ಟು:
ಇನ್ನು ಜಿಲ್ಲೆಯಲ್ಲಿ ಸೋಂಕಿಗೆ ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 401ಕ್ಕೇರಿದೆ.
ಜಿಲ್ಲೆಯಲ್ಲಿ ಈವರೆಗೆ 1,06,431 ಮಂದಿಗೆ ಕೊರೊನಾ ಸೋಂಕು ತಪಾಸಣೆ ಮಾಡಲಾಗಿದ್ದು, 91,505 ಮಂದಿಗೆ ನೆಗೆಟಿವ್ ಬಂದಿದೆ. 14,926 ಮಂದಿಗೆ ಸೋಂಕು ತಗುಲಿದೆ. 3084 ಮಂದಿ ಸೋಂಕಿತರಾಗಿ ಕ್ವಾರೆಂಟೈನ್ ನಲ್ಲಿದ್ದಾರೆ.