ETV Bharat / state

ಸೈನೈಡ್ ಮೋಹನ್ ಪಾಪಿ ಕೃತ್ಯ: 17ನೇ ಯುವತಿ ಮೇಲಿನ ಅತ್ಯಾಚಾರ, ಕೊಲೆ ಆರೋಪ ಸಾಬೀತು - cyanide-mohan-was-prove-in- Mangaluru court

ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಮೋಹನ್​, ಮರುದಿನ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಕೆಗೆ ‘ಗರ್ಭ ನಿರೋಧಕ ಮಾತ್ರೆ’ ಎಂದು ತಿಳಿಸಿ ಸೈನೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಪ್ಲಾಟ್ ನಂ.1ರಲ್ಲಿ ಬಿದ್ದಿದ್ದಳು. ತಕ್ಷಣ ಅಲ್ಲಿರುವವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಳು. ಇದೀಗ 17 ನೇ ಯುವತಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ ಸಾಬೀತಾಗಿದೆ.

ಸೈನೈಡ್ ಮೋಹನ್ ಮೇಲಿನ 17ನೇ ಕೊಲೆ ಆರೋಪ ಸಾಬೀತು
author img

By

Published : Oct 23, 2019, 6:08 PM IST

ಮಂಗಳೂರು: ಬಂಟ್ವಾಳದ ಯುವತಿವೋರ್ವಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರಣಿ ಹಂತಕ ಸೈನೈಡ್ ಮೋಹನ್‌ ವಿರುದ್ಧ ಆರೋಪವು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಅ.24ರಂದು ಪ್ರಕಟವಾಗಲಿದೆ.

ಸೈನೈಡ್ ಮೋಹನ್ ಮೇಲಿನ 17ನೇ ಕೊಲೆ ಆರೋಪ ಸಾಬೀತು

ಪ್ರಕರಣ ಹಿನ್ನೆಲೆ:

ಸೈನೈಡ್ ಮೋಹನ್ ಬಿ.ಸಿ. ರೋಡ್​ನ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಅಂಗನವಾಡಿ ಸಭೆ ಹಾಗೂ ಸಂಬಳಕ್ಕಾಗಿ ಬಿ.ಸಿ. ರೋಡ್‌ಗೆ ಬಂದಿದ್ದ ಆಕೆಯ ಬಳಿ ಮೋಹನ್ ತನ್ನನ್ನು ‘ಆನಂದ’ ಎಂದು ಪರಿಚಯಮಾಡಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಪಕ್ಕದ ಮನೆಯ ಲ್ಯಾಂಡ್ ಫೋನ್ ಮೂಲಕ ನಿರಂತರ ಮಾತನಾಡುತ್ತಿದ್ದ. ಈ ಮಧ್ಯೆ ಪ್ರೀತಿಸಿ ಮದುವೆಯಾಗುವ ನಾಟಕವಾಡಿ, ಎಲ್ಲಾ ಚಿನ್ನಾಭರಣ ಧರಿಸಿ ಬಿ ಸಿ ರೋಡ್​ಗೆ ಬರಲು ಹೇಳಿದ್ದ. ಅದರಂತೆ 2005ರ ಅ.21ರಂದು ಯುವತಿಯು ಸಹೋದ್ಯೋಗಿಗಳೊಂದಿಗೆ ಶೃಂಗೇರಿಗೆ ಪ್ರವಾಸಕ್ಕೆ ಹೋಗಲಿಕ್ಕಿದೆ ಎಂದು ಮನೆಯವರಲ್ಲಿ ತಿಳಿಸಿ ಬಿ.ಸಿ.ರೋಡ್‌ಗೆ ಬಂದಿದ್ದಳು. ಮೋಹನ್ ಆಕೆಯನ್ನು ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ.

ಅವರಿಬ್ಬರು ಬೆಂಗಳೂರಿನಲ್ಲಿ ಲಾಡ್ಜ್‌ವೊಂದರಲ್ಲಿ ಕೊಠಡಿ ಪಡೆದು ತಂಗಿದ್ದರು. ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಮೋಹನ್​, ಮರುದಿನ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಕೆಗೆ ‘ಗರ್ಭ ನಿರೋಧಕ ಮಾತ್ರೆ’ ಎಂದು ತಿಳಿಸಿ ಸೈಬೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಪ್ಲಾಟ್ ನಂ.1ರಲ್ಲಿ ಬಿದ್ದಿದ್ದಳು. ತಕ್ಷಣ ಅಲ್ಲಿರುವವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಳು. ಅ.27ರಂದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರು ಯಾರೂ ಬಾರದ ಕಾರಣ ಅಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದರು. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಆದ್ರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆ ಸೈನೈಡ್ ಸೇವಿಸಿರುವುದು ದೃಢಪಟ್ಟಿತ್ತು. ಯುವತಿ ಬಸ್ ನಿಲ್ದಾಣದಲ್ಲಿ ಬಿದ್ದ ಬಳಿಕ, ಮೋಹನ್ ತಂಗಿದ್ದ ರೂಮಿಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ. ಯುವತಿಯ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಪತ್ತೆಯಾಗದ ಕಾರಣ, ಅ.25ರಂದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.

2009ರ ಸೆ.21ರಂದು ಆರೋಪಿ ಮೋಹನ್ ಮತ್ತೋರ್ವ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನವಾಗಿ ವಿಚಾರಣೆ ಎದುರಿಸುತ್ತಿದ್ದಾಗ, ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸೈನೈಡ್ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆಯ ಅಂದಿನ ಇನ್ಸ್​ಪೆಕ್ಟರ್ ಲಿಂಗಪ್ಪ ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಆ ಬಳಿಕ ಸಿಒಡಿ ಇನ್‌ಸ್ಪೆಕ್ಟರ್ ವಜೀರ್‌ಸಾಬ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಯಿದುನ್ನೀಸಾ 41 ಸಾಕ್ಷಿಗಳನ್ನು ವಿಚಾರಣೆ ನಡೆಸಿ, 67 ದಾಖಲೆಗಳನ್ನು ಪರಿಗಣಿಸಿ ಅಪರಾಧ ಸಾಬೀತುಪಡಿಸಿ ಆದೇಶ ನೀಡಿದ್ದರು.

ಪ್ರಕರಣದ ಆರೋಪಿ ಮೋಹನ್‌ಕುಮಾರ್ ಮೇಲೆ ಐಪಿಸಿ ಸೆಕ್ಷನ್ 366 (ಅತ್ಯಾಚಾರ), ಸೆಕ್ಷನ್ 302 (ಕೊಲೆ), ಸೆಕ್ಷನ್ 328 (ವಿಷ ಉಣಿಸಿದ್ದು), ಸೆಕ್ಷನ್ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್ 394 (ವಿಷ ಉಣಿಸಿ ಸುಲಿಗೆ), ಸೆಕ್ಷನ್ 417 (ವಂಚನೆ), ಸೆಕ್ಷನ್ 207 (ಸಾಕ್ಷ್ಯನಾಶ)ದ ಅರೋಪ ಸಾಬೀತುಪಡಿಸಲಾಗಿದೆ. ಮೋಹನ್ ವಿರುದ್ಧ ದಾಖಲಾಗಿದ್ದ ಎಲ್ಲಾ ಆರೋಪಗಳು ಈ ಪ್ರಕರಣದಲ್ಲಿ ಸಾಬೀತಾಗಿವೆ.

Intro:ಮಂಗಳೂರು: ನಗರದ ಬಂಟ್ವಾಳದ ಯುವತಿಯೋರ್ವಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರಣಿ ಹಂತಕ ಸನೈಡ್ ಮೋಹನ್‌ ಮೇಲಿನ‌ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆ ಪ್ರಮಾಣ ಅ.24ರಂದು ಪ್ರಕಟವಾಗಲಿದೆ.

ಪ್ರಕರಣ ಹಿನ್ನೆಲೆ: ಸೈನೈಡ್ ಮೋಹನ್ ಬಿ.ಸಿ.ರೋಡ್ ನ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಬಾಳೆಪುಣಿಯ ಅಂಗನವಾಡಿಯಲ್ಲಿ ಸಹಾಯಕಿಯಾಗಿರುವ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಅಂಗನವಾಡಿ ಸಭೆ ಹಾಗೂ ಸಂಬಳಕ್ಕಾಗಿ ಬಿ.ಸಿ.ರೋಡ್‌ಗೆ ಬಂದಿದ್ದ ಆಕೆಯ ಬಳಿ ಮೋಹನ್ ತನ್ನನ್ನು ‘ಆನಂದ’ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಪಕ್ಕದ ಮನೆಯ ಲ್ಯಾಂಡ್ ಫೋನ್ ಮೂಲಕ ಮಾತನಾಡುತ್ತಿದ್ದ‌. ಬಳಿಕ ಪ್ರೀತಿಸುವ, ಮದುವೆಯಾಗುವ ನಾಟಕವಾಡಿ ಆಕೆಯ ಎಲ್ಲಾ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ 2005ರ ಅ.21ರಂದು ಯುವತಿಯು ಸಹೋದ್ಯೋಗಿಗಳೊಂದಿಗೆ ಶೃಂಗೇರಿಗೆ ಪಿಕ್‌ನಿಕ್‌ಗೆ ಹೋಗಲಿದೆ ಎಂದು ಮನೆಯವರಲ್ಲಿ ತಿಳಿಸಿ ಬಿ.ಸಿ.ರೋಡ್‌ಗೆ ಬಂದಿದ್ದಳು. ಮೋಹನ್ ಆಕೆಯನ್ನು ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ.

ಅವರಿಬ್ಬರು ಬೆಂಗಳೂರಿನಲ್ಲಿ ಲಾಡ್ಜ್‌ವೊಂದರಲ್ಲಿ ಕೊಠಡಿ ಪಡೆದು ತಂಗಿದ್ದರು. ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ. ಮರುದಿನ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಕೆಗೆ ‘ಗರ್ಭ ನಿರೋಧಕ ಮಾತ್ರೆ’ ಎಂದು ತಿಳಿಸಿ ಸಯನೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಪ್ಲಾಟ್ ನಂ.1ರಲ್ಲಿ ಬಿದ್ದಿದ್ದಾಳೆ. ತಕ್ಷಣ ಅಲ್ಲಿರುವವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಳು. ಅ.27ರಂದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರು ಯಾರೂ ಬಾರದ ಕಾರಣ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿತ್ತು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆ ಸಯನೈಡ್ ಸೇವಿಸಿರುವುದು ದೃಢಪಟ್ಟಿತ್ತು.
ಯುವತಿ ಬಸ್ ನಿಲ್ದಾಣದಲ್ಲಿ ಬಿದ್ದ ಬಳಿಕ ಮೋಹನ್ ತಂಗಿದ್ದ ರೂಮಿಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ.

Body:ಯುವತಿಯ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಅ.25ರಂದು ಮನೆಯವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.

2009ರ ಸೆ.21ರಂದು ಆರೋಪಿ ಮೋಹನ್ ಮತ್ತೋರ್ವ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನವಾಗಿ ವಿಚಾರಣೆ ನಡೆಸುತ್ತಿದ್ದಾಗ ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸಯನೈಡ್ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆಯ ಅಂದಿನ ಇನ್‌ಸ್ಪೆಕ್ಟರ್ ಲಿಂಗಪ್ಪ ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಆ ಬಳಿಕ ಸಿಒಡಿ ಇನ್‌ಸ್ಪೆಕ್ಟರ್ ವಜೀರ್‌ಸಾಬ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಯಿದುನ್ನೀಸಾ 41 ಸಾಕ್ಷಿ ವಿಚಾರಣೆ ನಡೆಸಿ, 67 ದಾಖಲೆ ಪರಿಗಣಿಸಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಆರೋಪಿ ಮೋಹನ್‌ಕುಮಾರ್ ಮೇಲೆ ಐಪಿಸಿ ಸೆಕ್ಷನ್ 366
(ಅತ್ಯಾಚಾರ), ಸೆಕ್ಷನ್ 302 (ಕೊಲೆ), ಸೆಕ್ಷನ್ 328 (ವಿಷ ಉಣಿಸಿದ್ದು), ಸೆಕ್ಷನ್ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್ 394 (ವಿಷ ಉಣಿಸಿ ಸುಲಿಗೆ), ಸೆಕ್ಷನ್ 417 (ವಂಚನೆ), ಸೆಕ್ಷನ್ 207 (ಸಾಕ್ಷ್ಯನಾಶ)ದ ಅಪರಾಧ ಸಾಬೀತುಪಡಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮೋಹನ್ ವಿರುದ್ಧ ದಾಖಲಾಗಿದ್ದ ಎಲ್ಲ ಆರೋಪ ಈ ಪ್ರಕರಣದಲ್ಲಿ ಸಾಬೀತಾಗಿದೆ.

ಸರಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತ ವಾದಿಸಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.