ಮಂಗಳೂರು: ಚಿನ್ನ ಡಕಾಯಿತಿ ಪ್ರಕರಣದೊಂದಿಗೆ ಅಪಹರಣ ಹಾಗೂ ಕೊಲೆ ಮಾಡಲು ಸುಪಾರಿ ನೀಡಿರುವ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮೀಷನರ್ ಶಶಿಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ 300 ಗ್ರಾಂ ಚಿನ್ನ,ಎರಡು ಕಾರು, 5 ಮಾರಕಾಸ್ತ್ರ ಸಹಿತ 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಮಹಜ್, ಕೇರಳದ ಮೊಹಮ್ಮದ್ ಆದಿಲ್, ಅಪಹರಣ ಹಾಗೂ ಕೊಲೆಗೆ ಯತ್ನಿಸಿರುವ ಮಂಗಳೂರಿನ ಅಬ್ದುಲ್ ಸಲಾಂ ಅಲಿಯಾಸ್ ಪಟೌಡಿ ಸಲಾಂ, ಮೊಹಮ್ಮದ್ ಶಾರೂಕ್, ಬೆಂಗಳೂರಿನ ಸೈಯದ್ ಹೈದರಾಲಿ, ಆಸೀಫ್ ಅಲಿ, ಮಹಾರಾಷ್ಟ್ರದ ಅಬ್ದುಲ್ ಶೇಖ್, ಹುಸೈನ್, ಶೇಖ್ ಶಾಜಿದ್ ಹುಸೈನ್, ಮಸ್ತಾಕ್ ಖುರೇಷಿ, ಥಾಣೆ ಭೀವಂಡಿ ನಿವಾಸಿ ಮುಶಾಹಿದ್ ಅನ್ಸಾರಿ ಬಂಧಿತ ಆರೋಪಿಗಳು. ಬಂಧಿತರಲ್ಲಿ ಮಾಜಿ ಶಾಸಕರ ಕಾರು ಚಾಲಕನೂ ಇದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬರೀ ಗನ್ ಮಾತ್ರವಲ್ಲ, ಐಪಿಎಸ್ ವಿಶ್ವನಾಥ್ ಸಜ್ಜನರ್ ಹೃದಯ ಮಾತನಾಡುತ್ತೆ ನೋಡ್ರಿ!