ETV Bharat / state

ತೊಗರಿ ಬೆಳೆ ಬೆಳೆದ ರೈತರಿಗೆ ಸಂಕಷ್ಟ.. ಖರೀದಿ ಕೇಂದ್ರವೇ ಇಲ್ಲದೆ ನಷ್ಟದ ಭೀತಿಯಲ್ಲಿ ಅನ್ನದಾತರು

ಕೇಂದ್ರ ಸರ್ಕಾರ ತೊಗರಿ ಬೆಳೆ ಹೆಚ್ಚಾಗಿ ಬೆಳೆಯುವ ತಾಲೂಕುಗಳ ಇಳುವರಿ ಅನುಗುಣವಾಗಿ ಆಯಾ ಗ್ರಾಪಂ ಮಟ್ಟದಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡಿದೆ. ಇತ್ತ ಅಧಿಕಾರಿಗಳು ಕೇಂದ್ರಗಳ ಸ್ಥಳ ನಿಗದಿಗೆ ಮುಂದಾಗಿಲ್ಲ ಎಂಬುದು ಕೃಷಿಕರ ಆರೋಪವಾಗಿದೆ..

author img

By

Published : Dec 29, 2020, 7:24 AM IST

There is no buying center for Pigeon pea crop
ತೊಗರಿ ಬೆಳೆ ಬೆಳೆದ ರೈತರು.....ಖರೀದಿಗೆ ಖರೀದಿ ಕೇಂದ್ರವೇ ಇಲ್ಲವೆನ್ನುವ ಆರೋಪ

ಚಿತ್ರದುರ್ಗ : ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನ ಸರ್ಕಾರ ತೆರೆಯದ ಕಾರಣ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಕಟಾವಿಗೆ ಬಂದ್ರೂ ಕೂಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖರೀದಿ ಕೇಂದ್ರಗಳನ್ನ ಇನ್ನೂ ತೆರೆಯಲಾಗಿಲ್ಲ.

ತೊಗರಿ ಬೆಳೆ ಬೆಳೆದ ರೈತರು.. ಖರೀದಿಗೆ ಖರೀದಿ ಕೇಂದ್ರವೇ ಇಲ್ಲವೆನ್ನುವ ಆರೋಪ

ಜಿಲ್ಲೆಯ ಮೊಳಕಾಲ್ಮೂರು, ಹಿರಿಯೂರು, ಚಳ್ಳಕೆರೆ ಸೇರಿ ಜಿಲ್ಲಾದ್ಯಂತ ಈ ವರ್ಷ ಸಾಂಪ್ರದಾಯಿಕ ಬೆಳೆ ಬದಲಾಗಿ ತೊಗರಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದಾರೆ‌‌. ಈ ಸಾಲಿನಲ್ಲಿ 23,600 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಅಲ್ಲದೇ ಪ್ರಸ್ತಕ ಸಾಲಿನಲ್ಲಿ 2.35 ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯಾಗಲಿದೆಯೆಂದು ಅಂದಾಜಿಸಿದ್ದಾರೆ. ಆದ್ರೆ, ನ್ಯಾಯಯುತ ಬೆಲೆಯನ್ನು ಕೃಷಿಕರಿಗೆ ನೀಡಲು ಅಧಿಕಾರಿಗಳು ಮುಂದಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಖರೀದಿ ಕೇಂದ್ರ ಸ್ಥಾಪಿಸಿಲ್ಲವೇ? : ವರ್ಷಧಾರೆ ಉತ್ತಮವಾಗಿ ಸುರಿದ ಕಾರಣ ಜಿಲ್ಲೆಯ ರೈತರು ಹೆಚ್ಚಾಗಿ ತೊಗರಿ ಬೆಳೆಗೆ ಮಾರು ಹೋಗಿದ್ದಾರೆ. ಬೆಳೆ ರಾಶಿಯ ಹಂತಕ್ಕೆ ತಲುಪಿದರೂ ಅಧಿಕಾರಿಗಳು ಈವರೆಗೂ ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ ಮಾಡದಿರೋದು ರೈತರ ಅನುಮಾನಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ತೊಗರಿ ಬೆಳೆ ಹೆಚ್ಚಾಗಿ ಬೆಳೆಯುವ ತಾಲೂಕುಗಳ ಇಳುವರಿ ಅನುಗುಣವಾಗಿ ಆಯಾ ಗ್ರಾಪಂ ಮಟ್ಟದಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡಿದೆ. ಇತ್ತ ಅಧಿಕಾರಿಗಳು ಕೇಂದ್ರಗಳ ಸ್ಥಳ ನಿಗದಿಗೆ ಮುಂದಾಗಿಲ್ಲ ಎಂಬುದು ಕೃಷಿಕರ ಆರೋಪವಾಗಿದೆ.

ಈ ಸುದ್ದಿಯನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣ ಸಂಗ್ರಹದಲ್ಲಿ ದಾಖಲೆ..!

ಬೆಂಬಲ ಬೆಲೆ ಎಷ್ಟು?: ಪ್ರತಿ ಕ್ವಿಂಟಾಲ್‌ ತೊಗರಿಗೆ ಕೇಂದ್ರ ಸರ್ಕಾರ 6,000 ರೂ. ದರ ನಿಗದಿ ಪಡಿಸಿದೆ. ಇದಲ್ಲದೆ ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ ತಲಾ ಕ್ವಿಂಟಾಲ್ ತೊಗರಿಗೆ 100 ರೂ. ನೀಡಲಿದೆ. ಪ್ರತಿ ರೈತನಿಂದ 10 ಕ್ವಿಂಟಾಲ್ ತೊಗರಿ ಖರೀದಿಗೆ ಅವಕಾಶ ನೀಡಿದೆ. ಆದ್ರೆ, ಅಧಿಕಾರಿಗಳೇ ಹೇಳುವ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ತೊಗರಿ ಕೇಂದ್ರಗಳ ಸ್ಥಾಪನೆ ಮಾಡಿಲ್ಲವಂತೆ. ಹಿರಿಯೂರು ತಾಲೂಕಿನ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ತೊಗರಿ ಬೆಳೆ ಬೆಳೆಯಲಾಗಿದೆ. ಆದ್ರೆ, ಅಧಿಕಾರಿಗಳು ತೊಗರಿ‌ ಖರೀದಿ ಕೇಂದ್ರಗಳ ಸ್ಥಾಪನೆ‌‌ ಮಾಡಿಲ್ಲ ಎಂದು ರೈತರು ಕಿಡಿಕಾರುತ್ತಿದ್ದಾರೆ.

ತೊಗರಿಗೆ ದಲ್ಲಾಳಿಗಳ ಹಾವಳಿ : ರೈತರ ತೊಗರಿ ಬೆಳೆಗೆ ಸೂಕ್ತ ಬೆಂಬಲ‌ ಬೆಲೆ ನೀಡದೆ ದಲ್ಲಾಳಿಗಳು ಮನಬಂದಂತೆ ದರ ನಿಗದಿ ಮಾಡಿ ಖರೀದಿ ಮಾಡುತ್ತಿದ್ದಾರೆನ್ನುವ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ತಕ್ಷಣವೇ ಗ್ರಾಮ ಪಂಚಾಯತ್​​​ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ಕೃಷಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.