ಚಿತ್ರದುರ್ಗ: ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ವಿಕಲಚೇತನರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಮಾತ್ರ ಮರೀಚಿಕೆಯಾಗಿದೆ.
ಇದನ್ನೂ ಓದಿ...ಗ್ರಾಪಂ ಚುನಾವಣೆ: ಆಯುಧಗಳನ್ನು ಠಾಣೆಗಳಲ್ಲಿ ಜಮೆ ಮಾಡಲು ಡಿಸಿ ಆದೇಶ
ಸರ್ಕಾರಿ ಕೆಲಸಕ್ಕೆ ಸೇರುವ ವಿಕಲಚೇತನರಿಗೆ ವಿಶೇಷ ಮೀಸಲಾತಿ ನೀಡುತ್ತಿದೆ. ಆದರೆ ಬಡ್ತಿ ಮೀಸಲಾತಿ ವಿಷಯದಲ್ಲಿ ಮಾತ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಖಾಸಗಿ ವಲಯದಲ್ಲೂ ದಿವ್ಯಾಂಗರಿಗೆ ಮೀಸಲಾತಿ ನೀಡಬೇಕೆಂಬ ಬಹು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಆದರೂ ಅನಿವಾರ್ಯವಾಗಿ ತೊಡಗಿಸಿಕೊಂಡಿದ್ದಾರೆ.
ವಿಕಲಚೇತನರ ಹಕ್ಕುಗಳ 2016ರ ಅಧಿನಿಯಮ ಪ್ರಕಾರ ಸರ್ಕಾರಿ ಹಾಗೂ ಖಾಸಗಿ ವಲಯದ ಕೆಲಸಗಳಲ್ಲಿ ಮೀಸಲಾತಿ ಕಲ್ಪಿಸಬೇಕಿದೆ. ಎ ಮತ್ತು ಬಿ ವೃಂದದ ಸರ್ಕಾರಿ ಕೆಲಸಗಳಲ್ಲಿ ಶೇ. 4ರಷ್ಟು, ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಸುಮಾರು 25,000 ವಿಕಲಚೇತನರು ಸರ್ಕಾರಿ ಸೇವೆಯಲ್ಲಿದ್ದು, ಬಡ್ತಿ ಮೀಸಲಾತಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಕಾದು ಕೂತಿದ್ದಾರೆ. ಅರೆ ಸರ್ಕಾರಿ ವಲಯದಲ್ಲಿ 10,000 (ಚಿತ್ರದುರ್ಗದಲ್ಲಿ 400) ವಿಕಲಚೇತನರು ಕಾರ್ಯನಿರ್ವಹಿಸುತ್ತಿದ್ದಾರೆ.