ಚಿತ್ರದುರ್ಗ: ಪ್ರಾಣಿಗಳಿಗೂ ಸಹ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಇರುತ್ತದೆ ಎಂಬುದಕ್ಕೆ, ಕೋತಿಯೊಂದು ತನ್ನ ಮೃತ ಮರಿಯನ್ನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಮನಕಲಕುವ ದೃಶ್ಯ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿದೆ.
ಜಿಲ್ಲೆಯ ಚಳ್ಳಕೆರೆ ನಗರದ ಶಾಂತಿ ನಗರದಲ್ಲಿ ಮರಿ ಕೋತಿಯೊಂದು ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ತಾಯಿ ಕೋತಿ ಅದನ್ನು ಅರಿಯದೇ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದೆ. ಮರಿ ಕೋತಿಯನ್ನ ಎತ್ತಿಕೊಂಡು ತಾಯಿ ಕೋತಿ ಮನೆಗಳ ಮೇಲೆ ಇದ್ದ ಸಿಟೆಂಕ್ಸ್ ನೀರಿನಲ್ಲಿ ಮುಳುಗಿಸಿ ಮೃತ ಮರಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಈ ತಾಯಿ ಕೋತಿಯ ಪರದಾಟ ನೋಡಿದರೆ ಎಂತಹವರಿಗೂ ಕರಳು ಚೂರ್ ಎನ್ನುವಂತಿತ್ತು.
ಕರುಳಿನ ಕುಡಿ ಕಣ್ಣೆದುರಿಗೆ ಸಾವನ್ನಪ್ಪಿದ್ದನ್ನು ನೋಡಿದ ತಾಯಿ ಕೋತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದು ತಾಸುಗಳ ಕಾಲ ತನ್ನ ಮುದ್ದಿನ ಮರಿಯನ್ನು ಮುಟ್ಟದ ತಾಯಿ ಕೋತಿ ಆ ಕಡೆಯಿಂದ ಈ ಕಡೆಗೆ ಸುತ್ತು ಹಾಕಿ ತನ್ನ ಮರಿ ಬದುಕಿಸಿ ಕೊಳ್ಳುವ ರೀತಿಯಲ್ಲಿ ಪ್ರಯತ್ನಿಸಿದೆ. ಒಂದು ತಾಸು ಕಳೆದ ನಂತರ ತನ್ನ ಮರಿಯನ್ನು ಎತ್ತಿ ಮುದ್ದಾಡಿದ ತಾಯಿ ಕೋತಿ, ತನ್ನ ಕರುಳಿನ ಸಂಕಟ ಹಾಗೂ ಅಸಾಹಾಯಕತೆಯಿಂದ ತನ್ನ ಕರುಳುಬಳ್ಳಿ ಬಿಡಲಾಗದ ಸ್ಥಿತಿಯಲ್ಲಿ ತಾಯಿ ಕೋತಿ ಓಡಾಡುತ್ತಿರುವ ದೃಶ್ಯ ಕಂಡು ಜನರು ಮರುಕ ಪಡುತ್ತಿದ್ದರು.
ಇದನ್ನೂ ಓದಿ:ಬಹಳ ದಿನಗಳ ಬಳಿಕ ದರ್ಶನಕೊಟ್ಟ ಸೂಪರ್ ಸ್ಟಾರ್ ರಜಿನಿಕಾಂತ್.. ಅಭಿಮಾನಿಗಳಲ್ಲಿ ಖುಷಿಯೋ ಖುಷಿ