ಚಿತ್ರದುರ್ಗ : ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಸ್ಥಾನ ತುಂಬಲು ಆಕಾಂಕ್ಷಿಗಳು ಹೆಚ್ಚಾಗಿರುವ ಕಾರಣ ಅದು ವಿಳಂಬವಾಗಿದೆ ಎಂದು ಶಾಸಕ ರಾಜೇಶ್ಗೌಡ ಹೇಳಿದರು.
ಇದನ್ನೂ ಓದಿ...ಚಿತ್ರದುರ್ಗ; ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ಗೆ ಚಾಲನೆ
ನಿಗಮಕ್ಕೆ ಅಧ್ಯಕ್ಷರನ್ನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶ್ರೀಘ್ರ ನೇಮಿಸುತ್ತಾರೆ. ನಾನು ಹಾಗೂ ಶಾಸಕಿ ಪೂರ್ಣಿಮಾ ಅವರು ಸಿಎಂಗೆ ಮನವಿ ಮಾಡಿದ್ದೇವೆ. ಅವರೂ ಭರವಸೆ ನೀಡಿದ್ದಾರೆ. ಆಸಕ್ತರು ಹೆಚ್ಚಾಗಿದ್ದಾರೆ. ಹೀಗಾಗಿ, ವಿಳಂಬವಾಗಿದೆ ಎಂದರು.
ಕಾಡುಗೊಲ್ಲ ವಾಸಿಸುವ ಸ್ಥಳಗಳನ್ನು ಕಂದಾಯ ಗ್ರಾಮಗಳಾಗಿ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಸಿಎಂಗೆ ಮನವಿ ಮಾಡಿರುವೆ. 140 ಗ್ರಾಮಗಳು ಕಂದಾಯ ಗ್ರಾಮಗಳಾಗಬೇಕಿದೆ.
ಆಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸವಲತ್ತುಗಳು ಸಿಗುತ್ತವೆ. ಶಿರಾ ಕ್ಷೇತ್ರದಲ್ಲಿ ಕೂಡ ಕಾಡುಗೊಲ್ಲ ಸಮುದಾಯ ಹೆಚ್ಚಾಗಿದೆ. 78 ಗ್ರಾಮಗಳು ಕಂದಾಯ ಗ್ರಾಮಗಳಾಗಬೇಕಿದೆ. ಈ ಕುರಿತು ಕೂಡ ಸಿಎಂಗೆ ಮನವಿ ಮಾಡಿದ್ದೇನೆ ಎಂದರು.