ಚಿತ್ರದುರ್ಗ: ಜಿಲ್ಲೆಯ ಯುವಕರಿಂದ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಚಿತ್ರದುರ್ಗ ನಗರದಲ್ಲಿ ಜಾಗೃತಿ ಮೂಡಿಸಲಾಯಿತು.
ಮಾರ್ಗ ನೇಚರ್ , ಜನಹಿತ ಸಭಾ ಹಾಗೂ ಶೆಲ್ಡನ್ ಬೇಕರಿ, ಸಹಯೇೂಗದಲ್ಲಿ ಯುವಕರು ಜಾಗೃತಿ ಅಭಿಯಾನ ಆರಂಭಿಸಿದ್ದು, ಅಭಿಯಾನಕ್ಕೆ ಕಬೀರಾನಂದ ಆಶ್ರಮದ ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮೀಜಿ ಚಾಲನೆ ನೀಡಿದರು. ಕೊರೊನಾ ಜಾಗೃತಿ ಭಿತ್ತಿ ಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ್ದು, ನಗರದ ಪ್ರಮುಖ ಸ್ಥಳಗಳು ಆಟೋಗಳಿಗೆ ಭಿತ್ತಿಪತ್ರ ಅಂಟಿಸುವ ಮೂಲಕ ಯುವಕರಿಂದ ಜಾಗೃತಿ ಮೂಡಿಸಲಾಯಿತು.
ಇನ್ನೂ ಜನರಿಗೆ ಮಾಸ್ಕ್, ಕರಪತ್ರ ಗಳನ್ನು ವಿತರಿಸಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗುವಂತೆ ಸೂಚಿಸಲಾಯಿತು.ಇಂದಿನಿಂದ ನಗರಾದಂತ್ಯ ನಿರಂತರವಾಗಿ ಪ್ರತಿನಿತ್ಯ ನಡೆಯುವ ಜಾಗೃತಿ ಅಭಿಯಾನ ಇದಾಗಿದೆ ಎಂದು ಯುವಕರು ತಿಳಿಸಿದ್ದಾರೆ.