ETV Bharat / state

ಚಿತ್ರದುರ್ಗ: ಇನ್ನೋವಾ ಕಾರಿನಲ್ಲಿ ₹8 ಕೋಟಿ ಪತ್ತೆ; ದಾಖಲೆ ಇಲ್ಲದ ಹಣ ಪೊಲೀಸ್ ವಶಕ್ಕೆ

₹8 crore cash found in a car near Chitradurga: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಕೋಟಿ ಕೋಟಿ ಹಣವನ್ನು ಹೊಳಲ್ಕೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

cash found in a car near chitradurga
ಕಾರಿನಲ್ಲಿ 8 ಕೋಟಿ ಹಣ ಪತ್ತೆ
author img

By ETV Bharat Karnataka Team

Published : Nov 30, 2023, 9:33 AM IST

ಚಿತ್ರದುರ್ಗ: ಇನ್ನೋವಾ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8 ಕೋಟಿ ರೂಪಾಯಿ ನಗದನ್ನು ಹೊಳಲ್ಕೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗದಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕಾರನ್ನು ಮಲ್ಲಾಡಿಹಳ್ಳಿ ಸಮೀಪ ಪರಿಶೀಲಿಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.

ಕಾರು ಚಾಲಕ ಸಚಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದು ಚಿತ್ರದುರ್ಗದ ಅಡಿಕೆ ವರ್ತಕರೊಬ್ಬರ ಹಣವಾಗಿದ್ದು, ಶಿವಮೊಗ್ಗದ ಇನ್ನೋರ್ವ ಅಡಿಕೆ ವರ್ತಕರಿಗೆ ನೀಡಲು ಹೊರಟಿದ್ದಾಗಿ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ. ಹಣದ ಬಗ್ಗೆ ಸೂಕ್ತ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

"ಸೂಕ್ತ ದಾಖಲೆಗಳು ಇಲ್ಲದ ಕಾರಣ ಪರಿಶೀಲನೆ ನಡೆಸುತ್ತಿದ್ದೇವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಐಟಿ ವಿಚಾರಣೆಯ ಬಳಿಕ ಈ ಹಣ ಯಾರಿಗೆ ಸೇರಿದ್ದು ಎಂಬುದು ಖಚಿತವಾಗಲಿದೆ" ಎಂದು ಚಿತ್ರದುರ್ಗ ಎಸ್​ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದರು.

ಹೊಳಲ್ಕೆರೆ ಠಾಣೆಯಲ್ಲಿ ಎಣಿಕೆ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರೇ ಹಣ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ: ₹2 ಕೋಟಿ ನಗದು ವಶ-ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.