ETV Bharat / state

ಚಿತ್ರದುರ್ಗಕ್ಕೆ ಸ್ಟಾರ್ ಮೌಲ್ಯ ತಂದುಕೊಟ್ಟ ಸಾಹಿತಿ ತ.ರಾ.ಸು ಅವರ ಜನ್ಮ ಶತಮಾನೋತ್ಸವ ಸಂಭ್ರಮ - ಕೋಟೆನಾಡು ಚಿತ್ರದುರ್ಗಕ್ಕೆ ಸ್ಟಾರ್ ಮೌಲ್ಯವನ್ನು ತಂದುಕೊಟ್ಟ ಸಾಹಿತಿ

ಕೋಟೆನಾಡು ಚಿತ್ರದುರ್ಗಕ್ಕೆ ಸ್ಟಾರ್ ಮೌಲ್ಯವನ್ನು ತಂದುಕೊಟ್ಟ ಸಾಹಿತಿ ತ.ರಾ.ಸು. ಇದೀಗ ಜಿಲ್ಲೆಯ ಜನ ತ.ರಾ.ಸು ಅವರ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿದ್ದಾರೆ.

100th-birthday-of-tarasura
ಸಾಹಿತಿ ತರಾಸು
author img

By

Published : Apr 20, 2020, 8:52 PM IST

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗಕ್ಕೆ ಸ್ಟಾರ್ ಮೌಲ್ಯವನ್ನು ತಂದುಕೊಟ್ಟಿದ್ದು ಸಾಹಿತಿ ತ.ರಾ.ಸು. ಇದೀಗ ಜಿಲ್ಲೆಯ ಜನ ತ.ರಾ.ಸು ಅವರ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿದ್ದಾರೆ. ಅವರು ಮರೆಯಾದ ಮಾಣಿಕ್ಯ ಆಗಿದ್ದು, ಜಿಲ್ಲೆಯಲ್ಲಿ ಅವರ ಸಾಹಿತ್ಯ ಮಾತ್ರ ಜೀವಂತವಾಗಿದೆ.

ಇವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಟಣ್ಣಯ್ಯನವರ ತಮ್ಮನ ಮಗನಾಗಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ 21/04/1919 ರಲ್ಲಿ ಜನಿಸಿದ್ದರು. ತ.ರಾ.ಸು ಅವರ ತಂದೆ ರಾಮಸ್ವಾಮಯ್ಯ. ತ.ರಾ. ಸುಬ್ಬರಾಯರು ಇಂಟರ್(ಪಿಯುಸಿ) ಮುಗಿದ ಕೂಡಲೇ ಓದಿಗೆ ಕೈ ಮುಗಿದು, ಸ್ವಾತಂತ್ರ್ಯ ಸಂಗ್ರಾಮದ ಚಳವಳಿಯಲ್ಲಿ ಧುಮುಕಿದ್ದರು.

ಸಾಹಿತಿ ತ.ರಾ.ಸು ಜನ್ಮ ಶತಮಾನೋತ್ಸವ ಸಂಭ್ರಮ...

ತ.ರಾ.ಸು ಅವರು ಬರೆದ ನಾಗರಹಾವು ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಇವರ ದುರ್ಗಾಸ್ತಮಾನ ಎಂಬ ಕಾದಂಬರಿಗೆ 1985ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತ್ತು. ಇವರು ಬರೆದಿರುವ ಪ್ರಮುಖ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ ಮತ್ತು ತಿರುಗುಬಾಣ ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ. ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ಕಥೆಗಳನ್ನು ಮೈನವಿರೇಳಿಸುವಂತೆ ಚಿತ್ರಿಸಿದ್ದಾರೆ.

ಚಳವಳಿಯ ನಂಟು ಹಾಗೂ ಸಾಹಿತ್ಯದ ಆಸಕ್ತಿಯಿಂದಾಗಿ ಅವರು ವಿಶ್ವಕರ್ನಾಟಕ, ಪ್ರಜಾಮತ ಸೇರಿದಂತೆ ರಾಜ್ಯ ಪತ್ರಿಕೆಗಳಲ್ಲಿ ದುಡಿದಿದ್ದರು. ಇವರ ಕಾದಂಬರಿಗಳಾದ ಮಸಣದ ಹೂವು, ಬಿಡುಗಡೆಯ ಬೇಡಿ, ಚಂದನದ ಗೊಂಬೆ, ಚಕ್ರ ತೀರ್ಥ, ಸಾಕು ಮಗಳು, ಮಾರ್ಗದರ್ಶಿ, ಬೆಂಕಿಯ ಬಲೆ, ಚಂದವಳ್ಳಿಯ ತೋಟ ಸೇರಿಸಿದಂತೆ ಜ್ವಾಲಾ, ಮೃತ್ಯು ಸಿಂಹಾಸನ, ಅನ್ನಾವತಾರ, ಮಹಾಶ್ವೇತೆ ನಾಟಕಗಳನ್ನು ಬರೆದಿರುವ ಕೀರ್ತಿ ತ.ರಾ.ಸು ಅವರದ್ದು. 1984 ರಲ್ಲಿ ಹೃದಯಾಘಾತದಿಂದ ಅಗಲಿದರು.

ಅವರು ಸಾಹಿತ್ಯ ಲೋಕದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದರು. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಜಿಲ್ಲೆಯ ಸಾಹಿತಿಗಳು ಸ್ಮರಿಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.