ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಭಾರತವೇ ಲಾಕ್ಡೌನ್ ಆಗಿದೆ. ಈ ಆದೇಶವನ್ನು ಗಾಳಿಗೆ ತೂರಿ ತೋಟದ ಮನೆಯಲ್ಲಿ ಸಾಮೂಹಿಕ ಪೂಜೆ ನೆರವೇರಿಸಿ, ಬಾಡೂಟ ಮಾಡಿದ ಘಟನೆ ಎನ್.ಆರ್. ತಾಲೂಕಿನ ಮಡಬೂರು ಗ್ರಾಮದಲ್ಲಿ ನಡೆದಿದೆ.
![violation of order: 14 villagers arrest](https://etvbharatimages.akamaized.net/etvbharat/prod-images/kn-ckm-05-case-av-7202347_02042020182648_0204f_1585832208_202.jpg)
ಪೂಜೆಯಲ್ಲಿ ಭಾಗಿಯಾದ ಎಲ್ಲರ ಮೇಲೆ ಚಿಕ್ಕಮಗಳೂರು ಪೊಲೀಸರು ಕೇಸ್ ದಾಖಲಿಸಿದ್ದು, 14 ಮಹಿಳೆಯರು, ಇಬ್ಬರು ಪುರಷರನ್ನು ಬಂಧಿಸಲಾಗಿದೆ. ಲಾಕ್ಡೌನ್ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ.