ETV Bharat / state

ಕಳಸ: ರಸ್ತೆ ಕಾಮಗಾರಿ ಪೂರ್ಣ, ಶಾಸಕರಿಂದ ಉದ್ಘಾಟನೆ ಆಗುವವರೆಗೂ ಓಡಾಟ ನಿರ್ಬಂಧ!

ಕಳಸ ತಾಲೂಕಿನ ನಕ್ಸಲ್‌ಪೀಡಿತ ಪ್ರದೇಶಗಳಾದ ಮಾವಿನಹೊಲ ಹಾಗೂ ಮಣ್ಣಿನಪಾಲ್ ಗ್ರಾಮಕ್ಕೆ ಹೋಗುವ ರಸ್ತೆ ಈಗ ಹೊಳೆ ನೀರು ಕುಡಿಯಲು ದೊಣ್ಣೆ ನಾಯಕನ ಅಪ್ಪಣೆ ಎಂಬಂತಾಗಿದೆ!.

road work competed but restriction public use
ರಸ್ತೆ ಕಾಮಗಾರಿ ಸಂಪೂರ್ಣ ಆದರೆ ಶಾಸಕರಿಂದ ಉದ್ಘಾಟನೆ ಆಗುವವರೆಗೂ ಓಡಾಟ ನಿರ್ಬಂಧ
author img

By

Published : May 18, 2022, 9:42 AM IST

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ನಕ್ಸಲ್‌ಪೀಡಿತ ಪ್ರದೇಶಗಳಾದ ಮಾವಿನಹೊಲ ಹಾಗೂ ಮಣ್ಣಿನಪಾಲ್ ಗ್ರಾಮಕ್ಕೆ ಹೋಗುವ ಮಾರ್ಗ ಕಾಮಗಾರಿ ಪೂರ್ಣವಾದರೂ ಜನ ಬಳಕೆಗೆ ಸಿಗುತ್ತಿಲ್ಲ. ಇಲ್ಲಿನ ಬಿಜೆಪಿ ಸದಸ್ಯರು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಂದು ಉದ್ಘಾಟನೆ ಮಾಡುವವರೆಗೂ ಓಡಾಡುವಂತಿಲ್ಲ ಎಂದು ರಸ್ತೆಗೆ ಬೇಲಿ ಹಾಕಿ, ಬಂಡೆ ಕಲ್ಲಿಟ್ಟು ಪೊಲೀಸ್ ಇಲಾಖೆಯ ಬ್ಯಾರಿಕೇಡ್ ನಿಲ್ಲಿಸಿದ್ದಾರೆ!.

ಜನಸಾಮಾನ್ಯರು ರಸ್ತೆಬದಿ ನಡೆದಾಡಬಹುದು ಅಷ್ಟೇ. ಬೈಕ್ ಕೂಡ ಓಡಾಡುವಂತಿಲ್ಲ. ಸರ್ಕಾರದ ದುಡ್ಡಲ್ಲಿ ನಿರ್ಮಿಸಿದ ರಸ್ತೆಯಲ್ಲಿ ರಾಜಕಾರಣಿಗಳ ದೌರ್ಜನ್ಯದ ವಿರುದ್ಧ ಕಳಸ ಜನರು ಅಸಮಾಧಾನ ಹೊರಹಾಕಿದ್ದಾರೆ. ಆದಿವಾಸಿಗಳೇ ಹೆಚ್ಚಿರುವ ಇಲ್ಲಿಗೆ 2018ರಲ್ಲಿ ಹೆಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾದ ಸಂದರ್ಭದಲ್ಲಿ 3 ಕೋಟಿ 20 ಲಕ್ಷ ರೂ ವೆಚ್ಚದಲ್ಲಿ 4 ಕಿ.ಮೀ. ಕಾಂಕ್ರೀಟ್ ರಸ್ತೆ ಮಂಜೂರಾಗಿ ಈಗ ಕಾಮಗಾರಿ ಮುಗಿದು ತಿಂಗಳಾಗಿದೆ.

ಈ ರಸ್ತೆಯನ್ನು ಸ್ಥಳೀಯರು ಮತ್ತು ಪ್ರವಾಸಿಗರು ಅವಲಂಬಿಸಿದ್ದಾರೆ. ಬಸರೀಕಟ್ಟೆ ಹಾಗೂ ಬಾಳೆಹೊನ್ನೂರಿಗೆ ರಸ್ತೆ ಸಂಪರ್ಕ ಕಲ್ಪಿಸಲಿದ್ದು, 10ಕ್ಕೂ ಹೆಚ್ಚು ಹಳ್ಳಿಗಳ ಜೀವನಾಡಿಯೂ ಹೌದು. ಇದು ಶಾರ್ಟ್ ಕಟ್ ಎಂದು ಪ್ರವಾಸಿಗರು ಕೂಡ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಇದನ್ನೂ ಓದಿ: ಅಂಕೋಲಾದಲ್ಲಿ ಗಮನ ಸೆಳೆದ ವಿಶಿಷ್ಟ ಬಂಡಿಹಬ್ಬ ಜಾತ್ರೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.