ETV Bharat / state

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ - chickmagaluru latest news

ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನರಿಗೆ ತಂಪಿನ ವಾತಾವರಣ ಸಿಕ್ಕಂತಾಗಿದೆ. ನಿನ್ನೆ ಸಂಜೆ ಮಳೆಯಿಂದ ಮಲೆನಾಡಿನ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡು ಬಂದಿದೆ..

rain in chickmagaluru
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ
author img

By

Published : Apr 17, 2021, 4:00 PM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆ ಸಂಜೆ ಅಲ್ಲಲ್ಲಿ ಆಲಿಕಲ್ಲು ಮಿಶ್ರಿತ ಮಳೆ ಸುರಿದಿದೆ. ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗಿದೆ.

ಬಾಳೆಹೊನ್ನೂರು, ಕೊಪ್ಪ, ಜಯಪುರ, ಕೊಟ್ಟಿಗೆಹಾರ, ಬಣಕಲ್ ಈ ಭಾಗದಲ್ಲಿ ನಿರಂತರ ಮಳೆ ಸುರಿದಿದೆ. ವಿಶೇಷವಾಗಿ ಬಾಳೆಹೊನ್ನೂರಿನ ಸಂಗಮೇಶ್ವರ ಪೇಟೆಯಲ್ಲಿ ಗುಡುಗು-ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ.

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ

ಇದನ್ನೂ ಓದಿ: ಹೆಚ್​​ಡಿಕೆ ಬೆನ್ನಲ್ಲೇ ನಿಖಿಲ್​ ಕುಮಾರಸ್ವಾಮಿಗೂ ತಗುಲಿದ ಕೊರೊನಾ

ಲಕ್ಷಾಂತರ ಪ್ರಮಾಣದಲ್ಲಿ ಆಲಿಕಲ್ಲು ನೆಲಕ್ಕೆ ಬಿದ್ದಿದೆ. ಮೂಡಿಗೆರೆ, ಕೊಪ್ಪ, ಎನ್‌ಆರ್‌ಪುರ ಭಾಗದಲ್ಲೂ ವರುಣನ ಅಬ್ಬರವಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರು ದಿನಗಳಿಂದ ಸುರಿದ ಈ ಮಳೆಗೆ ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನರಿಗೆ ತಂಪಿನ ವಾತಾವರಣ ಸಿಕ್ಕಂತಾಗಿದೆ. ನಿನ್ನೆ ಸಂಜೆ ಮಳೆಯಿಂದ ಮಲೆನಾಡಿನ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.