ಚಿಕ್ಕಮಗಳೂರು:ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಚಿಕ್ಕಮಗಳೂರು ನಗರ ಸಭೆಯ ಅಧ್ಯಕ್ಷನ ಹೈಡ್ರಾಮದಿಂದ ಬೇಸತ್ತಿದ್ದ ಬಿಜೆಪಿ ಎಲ್ಲ ಸದಸ್ಯರು ಅವಿಶ್ವಾಸ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರ ಸಭೆಯಲ್ಲಿ ಅವಿಶ್ವಾಸ ಮಂಡನೆ ಹಿನ್ನೆಲೆ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನ ಮನೆಗೆ ಟೈಟ್ ಸೆಕ್ಯೂರಿಟಿ ಪೋಲಿಸ್ ಇಲಾಖೆ ನೀಡಿದೆ. ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಮನೆ ಬಳಿ ಒಂದು ಕೆಎಸ್ಆರ್ಪಿ ತುಕಡಿ ಸಹ ನಿಯೋಜನೆ ಮಾಡಲಾಗಿದೆ.
ಮೂರು ತಿಂಗಳಿಂದ ನಾನಾ ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿರುವ ನಗರಸಭೆಯಲ್ಲಿ ನಾಳೆ ಏನು ಆಗುತ್ತೆ ಎಂಬುವುದು ನಗರ ಜನರಲ್ಲಿ ಕುತೂಹಲ ಮೂಡಿಸಿದೆ. ಅವಧಿ ಮುಗಿದ್ರು ರಾಜೀನಾಮೆ ನೀಡದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡು ಬಾರಿ ರಾಜೀನಾಮೆ ನೀಡಿ ಅಂಗೀಕಾರದ ವೇಳೆ ವಾಪಸ್ ಪಡೆದು ನಗರ ಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನಾಪತ್ತೆಯಾಗಿದ್ದರು.
ಈಗಾಗಲೇ ಬಿಜೆಪಿ ಪಕ್ಷದಿಂದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಅಮಾನತು ಮಾಡಲಾಗಿದ್ದು,ಅಧ್ಯಕ್ಷನನ್ನ ಕೆಳಗಿಳಿಸಲು ಅವರದೇ ಪಕ್ಷದ ನಗರಸಭೆ ಸದಸ್ಯರು ಹರಸಾಹಸ ಪಡುತ್ತಿದ್ದಾರೆ. 30 ತಿಂಗಳ ಆಡಳಿತದಲ್ಲಿ 18-12 ತಿಂಗಳಿಗೆ ಅಧಿಕಾರ ಹಂಚಿಕೆಯನ್ನು ಬಿಜೆಪಿ ಬಿಜೆಪಿ ಪಕ್ಷ ಆಂತರಿಕವಾಗಿ ಮಾಡಿ ಕೊಂಡಿತ್ತು. ಮೊದಲ ಅವಧಿಗೆ ವೇಣು ಗೋಪಾಲ್ ಅಧ್ಯಕ್ಷರಾಗಿದ್ದರು. ಈಗ ರಾಜೀನಾಮೆ ನೀಡದೇ ವೇಣು ಗೋಪಾಲ್ ಸದಸ್ಯರಿಗೆ ಆಟವನ್ನು ಆಡಿಸುತ್ತಿದ್ದು, ನಾಳೆ ನಗರಸಭೆ ಆವರಣದಲ್ಲಿ ಹೊಸ ಬೆಳವಣಿಗೆ ಸಾಧ್ಯತೆ ಇದೆ.
ಚಿಕ್ಕಮಗಳೂರು ನಗರಸಭೆಯಲ್ಲಿ ನಾಳೆ ಮತ್ತೊಂದು ಹೈಡ್ರಾಮ ನಡೆಯುವ ಸಾಧ್ಯತೆ ಇದ್ದು,ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್ ಮನೆ ಮುಂದೆ ಹಾಗೂ ನಗರಸಭೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದೆ.
ಬಿಜೆಪಿಯಿಂದ ವರಸಿದ್ಧಿ ವೇಣುಗೋಪಾಲ್ ಅಮಾನತು: ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರನ್ನು ಅಮಾನತು ಮಾಡಿ ಇತ್ತೀಚೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಅವರು ಆದೇಶ ಹೊರಡಿಸಿದ್ದರು. ಪಕ್ಷದ ಆಂತರಿಕ ತೀರ್ಮಾನವನ್ನ ಉಲ್ಲಂಘಿಸಿದ ಕಾರಣ ನೋಟಿಸ್ ನೀಡಿ, ಅಮಾನತು ಆದೇಶ ಹೊರಡಿಸಲಾಗಿತ್ತು.
20 ವರ್ಷಗಳಿಂದ ಸಿ ಟಿ ರವಿ ಆಪ್ತ ವಲಯದಲ್ಲಿ ವರಸಿದ್ದಿ ವೇಣುಗೊಪಾಲ್ ಗುರುತಿಸಿಕೊಂಡಿದ್ದರು. ಇನ್ನೊಬ್ಬರಿಗೆ ಅವಕಾಶ ನೀಡುವ ಸಲುವಾಗಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವೇಣುಗೋಪಾಲ್ಗೆ ರಾಜೀನಾಮೆ ನೀಡಲು ಪಕ್ಷ ಅವರಿಗೆ ಸೂಚಿಸಿತ್ತು. ಈ ವೇಳೆ, ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾರಿಗೂ ತಿಳಿಯದ ರೀತಿ ರಾಜೀನಾಮೆ ವಾಪಸ್ ಪಡೆದು ಕೊಂಡಿದ್ದರು. ಎರಡು ಬಾರಿ ರಾಜೀನಾಮೆ ನೀಡಿರುವ ವೇಣುಗೋಪಾಲ್, ಅಂಗೀಕಾರ ಆಗುವ ಮುನ್ನವೇ ರಾಜೀನಾಮೆ ವಾಪಸ್ ಪಡೆದು ಪಕ್ಷದ ಸದಸ್ಯರ ಆಕ್ರೋಶಕ್ಕೆ ಗುರಿಯಾಗಿದ್ದರು.
ಇದನ್ನೂಓದಿ:ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ ರಾಜಕೀಯ ನಿವೃತ್ತಿ ಸ್ವಯಂಪ್ರೇರಿತ ನಿರ್ಧಾರ : ಡಿ.ವಿ ಸದಾನಂದಗೌಡ