ETV Bharat / state

ಚಾರ್ಮಾಡಿ ಘಾಟ್​ ಮಂಗಗಳಿಗೆ ಆಹಾರ ನೀಡಿದ ತಹಶೀಲ್ದಾರ್

ಆಹಾರ ಸಿಗದೆ ಪರಿತಪ್ಪಿಸುತ್ತಿದ್ದ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ ರಸ್ತೆಯ ಮಂಗಗಳಿಗೆ ತಹಶೀಲ್ದಾರ್​ ರಮೇಶ್​ ಅವರು ಆಹಾರ ನೀಡುವ ಮೂಲಕ ಮೂಕ ಪ್ರಾಣಿಗಳ ವೇದನೆಗೆ ಸ್ಪಂದಿಸಿದ್ದಾರೆ.

mudigere-tahasildar-provide-food-for-chamrdadi-ghat-monkeys
ಚಾರ್ಮಾಡಿ ಘಾಟ್
author img

By

Published : Apr 14, 2020, 10:58 AM IST

ಚಿಕ್ಕಮಗಳೂರು: ಸದಾ ಪ್ರಯಾಣಿಕರು ನೀಡುತ್ತಿದ್ದ ಆಹಾರವನ್ನು ತಿಂದು ಬದುಕುತ್ತಿದ್ದ ಮಂಗಗಳು ಯಾರಾದರೂ ಇತ್ತ ಬರುತ್ತಾರಾ ಅಂತ ಚಾರ್ಮಾಡಿ ಘಾಟ್​​ನಲ್ಲಿ ಕಾಯುತ್ತಾ ಕುಳಿತಿವೆ.

ಚಾರ್ಮಾಡಿ ಘಾಟ್​ ಮಂಗಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ತಹಶೀಲ್ದಾರ್

ಕೊರೊನಾ ಕಂಟಕ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ ಸಂಕುಲಕ್ಕೂ ಸಂಕಷ್ಟ ತಂದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನ ರಸ್ತೆ ಬದಿ ಉದ್ದಕ್ಕೂ ಕಾಣಿಸುತ್ತಿದ್ದ ಮಂಗಗಳು ತಿನ್ನಲು ಆಹಾರ ಸಿಗದೆ ಪರಿತಪಿಸುತ್ತಿವೆ. ಕಳೆದ 25 ದಿನಗಳಿಂದ ರಸ್ತೆಯಲ್ಲಿ ವಾಹನಗಳ ಸುಳಿವೇ ಇಲ್ಲದೆ ವಾನರಗಳ ಪಾಡು ಹೇಳ ತೀರದಂತಾಗಿದೆ.

ಇದನ್ನು ಮನಗಂಡ ಮೂಡಿಗೆರೆ ತಹಶೀಲ್ದಾರ್ ರಮೇಶ್, ತಮ್ಮ ಸಿಬ್ಬಂದಿ ಜೊತೆ ಸೇರಿ ಚಾರ್ಮಾಡಿ ಘಾಟ್​​ ರಸ್ತೆಯುದ್ದಕ್ಕೂ ಮಂಗಗಳಿಗೆ ಹಣ್ಣು ಹಂಪಲುಗಳನ್ನು ನೀಡಿ ಮಾನವೀಯತೆ ಮೆರೆಯುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.