ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಬೋಜೇಗೌಡರಿಗೆ ಚಿಕ್ಕಮಗಳೂರು ನಗರದಲ್ಲಿ ಭಾನುವಾರ ಹಾಲಿನ ಅಭಿಷೇಕ ಮಾಡಿದರು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪರಮಾಪ್ತ ಆಗಿರುವ ಬೋಜೇಗೌಡ, ಚಿಕ್ಕಮಗಳೂರಿನ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದ ಬೋಜೇಗೌಡ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಪರ ಮತಯಾಚಿಸಿದ್ದರು. ಈ ಮೂಲಕ ಸಿ. ಟಿ. ರವಿ ಸೋಲಿನ ಮಾಸ್ಟರ್ ಮೈಂಡ್ ಆಗಿದ್ದಾರೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಬೋಜೆಗೌಡರಿಗೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ಸನ್ಮಾನ ಹಾಗೂ ಹಾಲಿನ ಅಭಿಷೇಕ ಮಾಡಿದ್ದಾರೆ.
ದುರಹಂಕಾರ, ನಾಲಿಗೆ ಎಲ್ಲವೂ ಸೇರಿ ಸಿ ಟಿ ರವಿ ಸೋಲಿಗೆ ಕಾರಣ: ಸಿ ಟಿ ರವಿ ಅವರು ಶಾಸಕರಾಗಿ, ಸಚಿವರಾಗಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಟೀಕೆಗಳನ್ನು ಮಾಡುವುದು ತಪ್ಪಲ್ಲ. ಆದರೆ ಅದಕ್ಕೊಂದು ಇತಿಮಿತಿ ಇರುತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ. ಸಿ ಟಿ ರವಿ ಕೆಲವು ನಾಯಕರುಗಳಿಗೆ ಸದನದ ಒಳಗೆ ಮತ್ತು ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ಧಿತನವನ್ನ ಯೋಚನೆ ಮಾಡಬೇಕು ಎಂದರು.
ರವಿಯವರು ಬುದ್ಧಿವಂತರಿದ್ದಾರೆ. ಯಾರನ್ನೋ ಮೆಚ್ಚಿಸಲು, ಕ್ಷಣಿಕ ಸುಖಕ್ಕಾಗಿ ಮತ್ತು ಪಕ್ಷದ ಕಾರ್ಯಕರ್ತರ ಮೆಚ್ಚಿಸಲು ಸಲುವಾಗಿ ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ದೇವೇಗೌಡರಿಗೆ ಸಾಬರಾಗಿ ಹುಟ್ಟಲಿ ಎನ್ನುವುದು, ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದು, ಸಿ ಟಿ ರವಿ ಯಾರನ್ನು ಬಿಟ್ಟಿದ್ದಾರೆ. ಟೀಕೆ ಮಾಡುವಾಗ ರಾಜಕೀಯ ಮಟ್ಟದಲ್ಲಿ ಟೀಕೆ ಮಾಡಬೇಕು. ರಾಜಕೀಯಕ್ಕೆ ಸಂಬಂಧ ಪಟ್ಟಂತೆ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ ಸರ್. ಅಷ್ಟು ಸುಲಭ ಇಲ್ಲ 'Blood is thicker than water' ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚನೆ ಮಾಡುತ್ತಾರೆ. ಸಿ ಟಿ ರವಿಯವರಿಗೆ ಅವರ ನಾಲಿಗೆನೇ ಮುಳ್ಳಾಯಿತು ಎಂದು ಬೋಜೇಗೌಡ ಹರಿಹಾಯ್ದರು.
ಇದನ್ನೂ ಓದಿ: ಶಾಸಕಾಂಗ ಪಕ್ಷದ ಸಭೆ ನಂತರ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ: ಮಲ್ಲಿಕಾರ್ಜುನ್ ಖರ್ಗೆ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಡಿ ತಿಮ್ಮಯ್ಯ ಅವರು 85,051 ಮತಗಳನ್ನು ಪಡೆದು ಗೆದ್ದರೇ ಸಿ ಟಿ ರವಿ 79,120 ಮತಗಳನ್ನು ಪಡೆದು ಸೋಲಿನ ರುಚಿ ಕಂಡಿದ್ದಾರೆ. ಸತತ ನಾಲ್ಕು ಬಾರಿ ವಿಜಯ ಸಾಧಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರತಿನಿಧಿಸುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಈಗ ಅವರ ಆಪ್ತ ಹೆಚ್ ಡಿ ತಮ್ಮಯ್ಯ ಅವರ 'ಕೈ' ವಶವಾಗಿದೆ.
ಇದನ್ನೂ ಓದಿ: ಜಮೀರ್ ಅಹ್ಮದ್ಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿ: ಸಾಗರದಲ್ಲಿ ಜಮೀರ್ ಅಭಿಮಾನಿಗಳಿಂದ ಪ್ರತಿಭಟನೆ