ETV Bharat / state

ಗೊಲ್ಲರ ಮಕ್ಕಳ ಶೂಗಳಿಂದ ಮೈಲಿಗೆ ಆರೋಪ: ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದ್ದೇನು? - children

ಗೊಲ್ಲರ ಮಕ್ಕಳು ಶೂ ಧರಿಸುವುದರಿಂದ ಮೈಲಿಗೆ ಆಗುತ್ತದೆ ಎಂಬ ಕಾರಣಕ್ಕೆ ಬರಿಗಾಲಲ್ಲಿ ಶಾಲೆಗೆ ತೆರಳುತ್ತಿದ್ದಾರೆ ಎಂಬ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

chikkamagaluru
ಗೊಲ್ಲರ ಹಟ್ಟಿ
author img

By ETV Bharat Karnataka Team

Published : Jan 7, 2024, 12:50 PM IST

Updated : Jan 7, 2024, 2:04 PM IST

ಕ್ಷೇತ್ರ ಶಿಕ್ಷಣಾಧಿಕಾರಿ ಹಾಗು ಶಾಲಾ ಮುಖ್ಯೋಪಾಧ್ಯಾಯರ ಹೇಳಿಕೆಗಳು

ಚಿಕ್ಕಮಗಳೂರು: ಗೊಲ್ಲರ ಹಟ್ಟಿಯ ಮಕ್ಕಳು ಶೂ ಧರಿಸಿ ಶಾಲೆಗೆ ತೆರಳುವುದರಿಂದ ಮೈಲಿಗೆ ಆಗುತ್ತದೆ. ಹೀಗಾಗಿ ಬರಿಗಾಲಲ್ಲೇ ಶಾಲೆಗೆ ಬರುತ್ತಿದ್ದಾರೆ ಎಂಬ ಗಂಭೀರ ಆರೋಪ ಇತ್ತೀಚಿಗೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸ್ಪಷ್ಟನೆ ನೀಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಪ್ರತಿಕ್ರಿಯಿಸಿ, "ಶಾಲೆಯ ಪ್ರತಿಯೊಬ್ಬ ಮಗುವಿಗೂ ಶೂ ಹಾಗೂ ಸಮವಸ್ತ್ರ ವಿತರಿಸಿದ್ದೇವೆ. ಆಗ ಎಲ್ಲರೂ ಶೂ ಧರಿಸಿ ಶಾಲೆಗೆ ಬರುತ್ತಿದ್ದರು. ನಾನು ಶಾಲೆಗೆ ಭೇಟಿ ನೀಡಿದಾಗ ನಾಲ್ವರು ಮಕ್ಕಳು ಮಾತ್ರ ಬರಿಗಾಲಿನಲ್ಲಿ ಬಂದಿದ್ದರು. ಈ ಬಗ್ಗೆ ಶಿಕ್ಷಕರನ್ನು ವಿಚಾರಿಸಿದಾಗ, ಶೂ ಕಿತ್ತು ಹೋಗಿದೆ. ಹಾಗಾಗಿ ಹಾಕಿಕೊಂಡು ಬರಲಿಲ್ಲ ಎಂದು ಮಕ್ಕಳು ಹೇಳಿದ್ದಾರೆ. ಪ್ರತಿಯೊಬ್ಬರೂ ಶಾಲೆಗೆ ಶೂ ಧರಿಸಿಕೊಂಡು ಬರುತ್ತಾರೆ. ಈ ಶಾಲೆಯಲ್ಲಿ 71 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಆರೋಪ ಶುದ್ಧ ಸುಳ್ಳು. ಶಾಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಯಾರೋ ಬೇಕಂತಲೇ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ" ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಅಂಜನಪ್ಪ ಮಾತನಾಡಿ, "ಶಾಲೆಯಲ್ಲಿ ಗೊಲ್ಲ ಸಮುದಾಯದ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ವಾರದಲ್ಲಿ ಐದು ದಿನ ಮಕ್ಕಳು ಶೂ ಧರಿಸಿಕೊಂಡು ಬರುತ್ತಾರೆ. ಈ ವಿಚಾರ ನಮಗೂ ಬೆಳಿಗ್ಗೆಯೇ (ಶನಿವಾರ) ತಿಳಿಯಿತು. ಆರೋಪ ಸುಳ್ಳು. ಒಂದು ವೇಳೆ ಯಾವುದೇ ಮಗು ಶೂ ಧರಿಸದೇ ಶಾಲೆಗೆ ಬಂದರೆ ದೈಹಿಕ ಶಿಕ್ಷಕರು ಅವರನ್ನು ಮನೆಗೆ ಕಳುಹಿಸುತ್ತಾರೆ. ಇಲ್ಲಿ ಶಿಸ್ತುಪಾಲನೆ ಆಗುತ್ತಿದೆ" ಎಂದರು.

ಇದನ್ನೂ ಓದಿ: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಬಂಧನ, ದೇವಸ್ಥಾನಕ್ಕೆ ಬೀಗ

Last Updated : Jan 7, 2024, 2:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.