ಚಿಕ್ಕಮಗಳೂರು: ವಿಧಾನ ಪರಿಷತ್ನಲ್ಲಿ ಆ ರೀತಿಯ ಘಟನೆ ನಡೆಯಲು ಕಾರಣ ಯಾರು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಆ ಸಭೆ ನಡೆಯಲು ಒಬ್ಬ ಚೇರ್ಮನ್ ಇರುತ್ತಾರೆ. ಅವರು ಸಂವಿಧಾನಾತ್ಮಕವಾಗಿ ಆಯ್ಕೆಯಾಗಿರುತ್ತಾರೆ. ವಿಧಾನ ಪರಿಷತ್ ಕಾನೂನಿನ ಪ್ರಕಾರ ನಡೆಯುತ್ತೆ. ವಿಧಾನ ಪರಿಷತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದರೆ ಅದಕ್ಕೂ ವಿಧಿ ವಿಧಾನಗಳಿವೆ.
ಓದಿ: ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆಯಿಂದ ತುಂಬಾ ನೋವಾಗಿದೆ: ಹೊರಟ್ಟಿ
ನಂತರ ಈ ವಿಚಾರ ಚರ್ಚೆಗೆ ಬರುತ್ತದೆ. ಯಾವ ದಿನ ಚರ್ಚೆ ಮಾಡಬೇಕು ಎಂಬುದನ್ನು ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಆದರೆ ಚೇರ್ಮನ್ ಇದ್ದರೂ ಕೂಡ ಅವರ ವಿರುದ್ಧ ಅವಿಶ್ವಾಸ ಪಾಸ್ ಆಗಿಲ್ಲ. ಮೊದಲೇ ಚೇರ್ಮನ್ ಬರುವ ಬಾಗಿಲನ್ನು ಮುಚ್ಚಿ ಉಪ ಸಭಾಪತಿಯನ್ನು ಕೂರಿಸಿದ್ದು ಸರಿಯಲ್ಲ. ಸಂವಿಧಾನ ಹಾಗೂ ಸಭೆಯ ನಡುವಳಿಯ ವಿರುದ್ಧವಾಗಿ ನಡೆದರೆ ಕಾಂಗ್ರೆಸ್ನವರು ಪ್ರತಿಭಟನೆ ಮಾಡುತ್ತಾರೆ ಎಂದು ಹೇಳಿದರು.